ಬ್ರಿಟನ್ ನಿಂದ ಧಾರವಾಡಕ್ಕೆ ಬಂದ ಐವರಿಗೆ ಹೋಮ್ ಕ್ವಾರಂಟೈನ್

ಧಾರವಾಡ ಜಿಲ್ಲೆಗೆ ಬ್ರಿಟನ್ ನಿಂದ ಐದು ಜನರು ಆಗಮಿಸಿದ್ದು, ಜಿಲ್ಲೆಗೂ ಈಗ ರೂಪಾಂತರ ಕೊರೊನಾದ ಆಂತಕ ಶುರುವಾಗಿದೆ. ಬ್ರಿಟನ್ ನಿಂದ ಬಂದ ಈ ಐದು ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ದಿ.21 ರವರೆಗೆ ಜಿಲ್ಲೆಗೆ ಬ್ರಿಟನ್ ನಿಂದ ಐದು ಜನ ಆಗಮಿಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಐವರ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಯನ್ನು ಆರ್ ಟಿಪಿಎಸ್ಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ರಾತ್ರಿ ಪರೀಕ್ಷಾ ವರದಿಗಳು ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾದಿಂದಾಗಿ ತತ್ತರಿಸಿರುವ ಮನುಕುಲಕ್ಕೆ ಈ ರೂಪಾಂತರ ಕೊರೊನಾದಿಂದಾಗಿ ಮತ್ತೆ ಆತಂಕ ಎದುರಾಗಿದೆ ಎನ್ನಲಾಗಿದೆ.