ಬ್ರಿಟನ್‌ನಿಂದ ನಗರಕ್ಕೆ ಆಗಮಿಸಿದ್ದ ೭ ಜನರು ಮತ್ತು ಅವರ ಕುಟುಂಬದವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್

ಕಲಬುರಗಿ:ಡಿ.24: ಕೊರೊನಾ ರೂಪಾಂತರ ಅಲೆ ಭೀತಿ ನಡುವೆ ಬ್ರಿಟನ್‌ನಿಂದ ಕಲಬುರಗಿ ನಗರಕ್ಕೆ ಆಗಮಿಸಿದ್ದ ಎಲ್ಲ ೭ ಜನರು ಮತ್ತು ಅವರ ಕುಟುಂಬದವರು ಸೇರಿ ಒಟ್ಟು ೧೮ ಜನರು ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಡಿ.೬ರಿAದ ೧೮ರವರೆಗೂ ಏಳು ಜನರು ಬ್ರಿಟನ್‌ನಿಂದ ನಗರಕ್ಕೆ ಆಗಮಿಸಿದ್ದರು.
ಬ್ರಿಟನ್‌ನಲ್ಲಿ ಮಹಾಮಾರಿ ಸೋಂಕಿನ ಹಾವಳಿ ಮತ್ತೆ ಶುರುವಾಗಿದ್ದರಿಂದ ಆತಂಕ
ಪಡುವAತೆ ಆಗಿತ್ತು. ಇವರು ನಗರಕ್ಕೆ ಬರುವ ಮುನ್ನವೇ ಆರ್‌ಟಿ-ಪಿಸಿಆರ್
ಪರೀಕ್ಷೆಗೆ ಒಳಗಾಗಿದ್ದರು. ಆಗ ಕೊರೊನಾ ನೆಗೆಟಿವ್ ಎಂದೇ ಇತ್ತು.
ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣ
ಇಲಾಖೆಯಿಂದ ಬುಧವಾರ ಆರ್‌ಟಿ-ಪಿಸಿಆರ್ ಪರೀಕ್ಷೆಗಾಗಿ ಬ್ರಿಟನ್‌ನಿಂದ ಬಂದ ೭ ಜನ
ಮತ್ತವರ ಕುಟುಂಬದವರ ಗಂಟಲು ಮಾದರಿ ಸಂಗ್ರಹಿಸಲಾಗಿತ್ತು. ಇದರ ವರದಿ
ಗುರುವಾರ ಬಂದಿದ್ದು, ಕೊರೊನಾ ನೆಗೆಟಿವ್ ಎಂದು ದೃಢಪಟ್ಟಿದೆ.
ಇನ್ನು, ೭ ಜನರಲ್ಲಿ ಒಂದು ವರ್ಷದ ಮಗು ಹಾಗೂ ತಾಯಿ ಬೀದರ್‌ಗೆ ತೆರಳಿದ್ದು,
ಅಲ್ಲಿ ಇವರ ಪರೀಕ್ಷೆ ಮಾಡಲಾಗಿದೆ. ಅವರದ್ದೂ ಕೊರೊನಾ ನೆಗೆಟಿವ್ ಇದೆ ಎಂದು
ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಗ್ಯಾಧಿಕಾರಿ ಡಾ.ರಾಜಶೇಖರ್ ಮಾಲಿ
ತಿಳಿಸಿದ್ದಾರೆ.