ಬ್ರಿಟನ್‌ನಲ್ಲಿ ಲಸಿಕೆ ಬಳಕೆಗೆ ಭಾರತದಲ್ಲಿ ಅನುಮತಿ

ಲಂಡನ್, ಡಿ. ೩೧. ಬ್ರಿಟನ್‌ನಲ್ಲಿ ರೂಪಾಂತರ ಕೊರೊನಾ ಅಲೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಹಾಗೂ ಆಸ್ಟ್ರಾಝೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಬಳಕೆಗೆ ಅನುಮೋದನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಲಸಿಕೆ ಬಳಕೆ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ. ಮುಂದಿನ ವಾರದಿಂದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಬ್ರಿಟನ್ ಈಗಾಗಲೇ ಸ್ಪಷ್ಟಪಡಿಸಿದೆ.
ಭಾರತೀಯರಿಗೂ ಈ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿದ್ದು ಕೆಲವು ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೇ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ ಯ ವಿಷಯ ತಜ್ಞರ ಸಮಿತಿ, ಈ ಲಸಿಕೆ ಬಳಕೆಯ ಕುರಿತು ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸುತ್ತಿದೆ.
ಈ ಸಂಬಂಧ ಚರ್ಚೆ ನಡೆಸಲು ನಾಳೆ ಸಮಿತಿಯ ಸಭೆ ನಡೆಯಲಿದ್ದು ಲಸಿಕೆಯ ಸುರಕ್ಷತೆ ಮತ್ತು ಅದರ ಪರಿಣಾಮಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಬ್ರಿಟನ್ನಿನ ವೈದ್ಯಕೀಯ ಮತ್ತು ಆರೋಗ್ಯ ಉತ್ಪಾದನಾ ನಿಯಂತ್ರಣ ಸಂಸ್ಥೆ ಕೈಗೊಂಡಿರುವ ನಿರ್ಧಾರ ಮತ್ತು ಅದರ ಹಿನ್ನೆಲೆ ಮುಂತಾದ ವಿಚಾರಗಳು ಈ ಸಭೆಯಲ್ಲಿ ಚರ್ಚೆಗೆ ಬರಲಿವೆ.
ಪುಣೆಯ ಸೇರುಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಡ್ ೧೯ ಲಸಿಕೆಯನ್ನು ತಯಾರಿಸುತ್ತಿದೆ. ಇದು ಅಗ್ಗದ ದರದಲ್ಲಿ ಲಭ್ಯವಾಗಲಿದ್ದು ದಾಸ್ತಾನು ಮಾಡಲು ಹಾಗೂ ಸಾಗಣೆ ಮಾಡಲು ಸುಲಭವಾಗಲಿದೆ .ಈ ಎಲ್ಲ ವಿಚಾರಗಳನ್ನು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.
ಫೈಜರ್, ಬಯೋ ಎನ್ ಟೆಕ್ ಹಾಗೂ ಮಾಡರ್ನ ಲಸಿಕೆ ಗಳನ್ನು ಈಗಾಗಲೇ ಇತರ ದೇಶಗಳು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಇವುಗಳ ಪರಿಣಾಮ ಮತ್ತು ಸುರಕ್ಷತೆ ವಿಚಾರವು ಪರಿಶೀಲನೆಯಲ್ಲಿದೆ.