ಬ್ರಿಜ್  ಭೂಷಣ್ ಸಿಂಗ್ ರನ್ನು  ತಕ್ಷಣವೇ ಬಂಧಿಸಲು  ಆಗ್ರಹ 

ಹರಿಹರ ಜೂ ೯;  ಭಾರತೀಯ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ರವರು ಕೆಲ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ  ಹಿನ್ನೆಲೆಯಲ್ಲಿಹರಿಹರ ತಾಲೂಕಿನ ಕ್ರೀಡಾಪಟುಗಳ , ಪ್ರಗತಿಪರ ಚಿಂತಕರ , ಸಾಹಿತಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ತೆರಳಿ ಮನವಿಯನ್ನು ಸಲ್ಲಿಸಿದರು. ಸುಮಾರು 30 ಜನ ಕ್ರೀಡಾಪಟುಗಳು , ಕ್ರೀಡಾ ಅಭಿಮಾನಿಗಳು , ಬ್ರಿಜ್ ಭೂಷನ್ ಸಿಂಗ್ ವಿರುದ್ಧ , ಪ್ರತಿಭಟನೆಯ ಮೆರವಣಿಗೆ ಹಾಗೂ ರಾಜ್ಯ – ಕೇಂದ್ರ ಸರ್ಕಾರಗಳಿಗೆ ಬ್ರಿಜ್  ಭೂಷಣ್ ಸಿಂಗ್ ನನ್ನು ತಕ್ಷಣವೇ ಬಂಧಿಸಿ , ಕ್ರೀಡಾಪಟುಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಅಗ್ರಿಸಿದರು ಕ್ರೀಡೆಗೆ ಜಾತಿ , ಧರ್ಮ, ಲಿಂಗ ಭೇದ ಯಾವುದು ಇಲ್ಲ. ಸಾಮರಸ್ಯಕ್ಕಾಗಿ ಆಡುವ ಈ ಕ್ರೀಡೆಗೆ ವಿಶೇಷವಾದ ಗೌರವ ಪ್ರಪಂಚದಲ್ಲಿ ಇದೆ . ಆದರೆ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ಕೆಲ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ವಿರೋಧವಾಗುತ್ತಿದೆ . ಕೂಡಲೇ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.ಮಾಜಿ ನಗರಸಭಾ ಅಧ್ಯಕ್ಷ ರೇವಣಸಿದ್ದಪ್ಪ. ಸಾಹಿತಿ ಕಾರ್ಮಿಕ ಮುಖಂಡ ಎಚ್ ಕೆ  ಕೊಟ್ರಪ್ಪ. ನಗರಸಭಾ ಸದಸ್ಯ ಶಂಕರ್ ಕಟಾವ್ಕರ್.   ಹಿರಿಯ ಕ್ರೀಡಾಪಟು ಮಾಜಿ  ದೂಡ ಸದಸ್ಯ ಎಚ್ ನಿಜಗುಣ. ಶಂಕರ್ ಮೂರ್ತಿ. ಸದಾಶಿವಪ್ಪ. ವಕೀಲರಾದ ಗಣೇಶ್ ದುರ್ಗದ್. ರಘುಪತಿ.ದೇವೇಂದ್ರಪ್ಪ.  ಪ್ರವೀಣ. ಭದ್ರಪ್ಪ.ಮಾದೇವಪ್ಪ. ಗೋವಿಂದಪ್ಪ.ಮಂಜುಳಾ. ಮಹಮ್ಮದ್ ಅಲಿ. ಶ್ರೀದೇವಿ.ರಾಮಚಂದ್ರಪ್ಪ. ಕರುಣಾಕರನ್. ಬಸವರಾಜ್. ಧನು. ಚನ್ನಬಸಪ್ಪ. ಮಲ್ಲೇಶಪ್ಪ. ಕೇಶವ.ನಾಗರಾಜ್. ರಾಜು (ಶಿವಯೋಗಿ ) ಪ್ರೊಫೆಸರ್ ನಿಂಗಪ್ಪ. ಪುರುಷ ಮಹಿಳಾ ಕ್ರೀಡಾಪಟುಗಳು ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.