ಲಿಂಗಸುಗೂರು,ಜೂ.೦೭-
ದೆಹಲಿಯಲ್ಲಿ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ವಿರೋಧಿಸಿ ನಡೆಸುತ್ತಿರುವ ನ್ಯಾಯೋಚಿತ ಹೋರಾಟವನ್ನು ದೆಹಲಿ ಪೋಲಿಸರ ಫ್ಯಾಸಿಸ್ಟ್ ಕ್ರಮವನ್ನು ವಿರೋಧಿಸಿ ಆರೋಪಿ ಬ್ರಿಜ್ ಭೂಷಣ್ ಶರಣ್‌ಸಿಂಗ್ ಬಂಧನಕ್ಕೆ ಆಗ್ರಹಿಸಿ ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ನೇತೃತ್ವದಲ್ಲಿ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಸೋಮುವಾರ ಮನವಿ ಸಲ್ಲಿಸಿದರು.
ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳುವ ಪ್ರಧಾನ ಮಂತ್ರಿಯವರು ಮಹಿಳಾ ಕುಸ್ತಿ ಪಟುಗಳ ಬೇಡಿಕೆಗಳಳಿಗೆ ಸ್ಫಂದಿಸಿಬೇಕು ಹಾಗೂ . ಆರೋಪಿಯನ್ನು ಬಂಧಿಸಬೇಕು ಮತ್ತು ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಿರುಪತಿ ಗೋನವಾರ, ಯಲ್ಲಪ್ಪ ದೊರೆ, ಬಾಲಾಜಿ, ರೈತ ಮುಖಂಡ ಶಿವುಪುತ್ರಪ್ಪಗೌಡ ನಂದಿಹಾಳ, ಹಾಗೂ ಇತರರು ಇದ್ದರು.