ಬ್ರಿಜ್ ಭೂಷಣ್ ವಜಾಕ್ಕೆ ಕುಸ್ತಿಪಟುಗಳ ಆಗ್ರಹ

ನವದೆಹಲಿ,ಜ.೨೦-ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ದುರ್ನಡತೆ ಆರೋಪ ಎದುರಿಸುತ್ತಿರುವ ಭಾರತೀಯ ವೆಸ್ಟಲ್ಲರ್ ಸಂಘದ ಅಧ್ಯಕ್ಷ ಹಾಗು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ದ ಸಂಜೆ ವೇಳೆಗೆ ಎಫ್‌ಐಆರ್ ದಾಖಲು ಮಾಡಿ ಸ್ಥಾನದಿಂದ ವಜಾ ಮಾಡುವಂತೆ ಕುಸ್ತಿಪಟುಗಳು ಬಿಗಿಪಟ್ಟು ಹಿಡಿದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರು ಅವರು ಮಹಿಳಾ ಕುಸ್ತಿಪಟುಗಳ ಜೊತೆ ಮೂರು ತಾಸಿಗೆ ಹೆಚ್ಚು ಸಮಯ ಸಭೆ ನಡೆಸಿದರೂ ಮಹಿಳಾ ಕುಸ್ತಿಪಟುಗಳು ಪಟ್ಟು ಸಡಿಲಿಸದೆ ಆರೋಪ ಎದುರಿಸುತ್ತಿರುವ ಸಂಘದ ಅಧ್ಯಕ್ಷ ಹಾಗು ಸಂಸದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬಿಗಿ ಪಟ್ಟು ಹಿಡಿದಿರುವುದು ಕೇಂದ್ರ ಸರ್ಕಾರ ಮುಜುಗರ ಎದುರಿಸುವಂತಾಗಿದೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳನ್ನು ಭೇಟಿ ಮಾಡಿ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರೂ ಸಂಜೆ ವೇಳೆಗೆ ಬ್ರಿಜ್ ಭೂಷಣ್ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅನಿವಾರ್ಯವಾಗಿ ಭಾರತೀಯ ಕುಸ್ತಿಸಂಸ್ಥೆಯ ಅಧ್ಯಕ್ಷರ ವಿರುದ್ದ ಎಫ್‌ಐಆರ್ ದಾಖಲು ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಕಾಯಲು ನಿರಾಕರಣೆ:
ಲೈಂಗಿಕ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ಸಿಂಗ್ ಮತ್ತು ಡಬ್ಲ್ಯುಎಫ್‌ಐ ಪದಾಧಿಕಾರಿಗಳಿಂದ ವಿವರಣೆ ಕೇಳಿರುವ ಕೇಂದ್ರ ಸರ್ಕಾರ ವರದಿ ಬರಲಿ ಆ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಕ್ರೀಡಾಪಟುಗಣಳು ಜಗ್ಗುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.
ಸರ್ಕಾರದ ಗಡುವು ಮುಕ್ತಾಯಗೊಳ್ಳುವವರೆಗೆ ನಾಳೆ ಸಂಜೆಯವರೆಗೆ ಕಾಯಿರಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಮನವಿ ಮಾಡಿದರೂ ಒಪ್ಪದ ಕುಸ್ತಿಪಟುಗಳು ಮೊದಲು ಸಂಘದ ಅಧ್ಯಕ್ಷರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಮತ್ತು ಡಬಲ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಪದಕ ವಿಜೇತ ವಿನೇಶ್ ಫೋಗಟ್ ನೇತೃತ್ವದ ಪ್ರತಿಭಟನಾಕಾರರುಸಿಂಗ್ ಅವರ ರಾಜೀನಾಮೆ ಪಡೆಯುವುದಲ್ಲದೆ ಸಂಘ ಮತ್ತು ಅದರ ಎಲ್ಲಾ ಅಂಗಸಂಸ್ಥೆ ರಾಜ್ಯ ಘಟಕ ವಿಸರ್ಜಿಸಿ ಎನ್ನುವ ಬಿಗಿ ಪಟ್ಟು ಹಿಡಿದಿದ್ದಾರೆ..