ಮೈಸೂರು: ಜೂ.06:- ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್‍ರಿಂದ ರಾಜೀನಾಮೆ ಪಡೆದು ಶಿಕ್ಷೆಗೆ ಒಳಪಡಿಸಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸುವಂತೆ ಜನತಂತ್ರ ಜಾಗೃತಿ ವೇದಿಕೆ, ಇತರ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ರಾಮಸಾಮಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಬಿಜೆಪಿ ಸರ್ಕಾರ ಕುಸ್ತಿಪಟುಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಖಂಡಿಸಿದರು. ಮಾತ್ರವಲ್ಲದೆ ಬ್ರಿಜ್ ಭೂಷಣ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಗತಿಪರ ಸಂಘಟನೆಯ ಮುಖಂಡ ಉಗ್ರನರಸಿಂಹೇಗೌಡ ಮಾತನಾಡಿ, ಆಲ್ ಇಂಡಿಯಾ ಕಿಸಾನ್ ಮೋರ್ಚಾ ಕರೆಗೆ ಓಗೊಟ್ಟು ಇಂದು ಎಲ್ಲಾ ಜನಪರ ಸಂಘಟನೆಗಳು ಭಾರತೀಯ ಮಹಿಳಾ ಕುಸ್ತಿಪಟುಗಳ ಮೇಲೆ ಲೈಗಿಂಕ ದೌರ್ಜನ್ಯ ಎಸಗಿರುವ ಭಾರತದ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವನನ್ನು ಅಧ್ಯಕ್ಷ ಸ್ಥಾನ, ಸಂಸದನ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಬ್ರಿಜ್‍ಭೂಷಣ್ ಮೇಲೆ ಎಫ್‍ಐಆರ್ ದಾಖಲಿಸಲು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಬೇಕಾಗಿದ ಪರಿಸ್ಥಿತಿ ಬಂದಿದೆ ಎಂದರೆ ಭಾರತದಲ್ಲಿ ಕಾನೂನು ವ್ಯವಸ್ಥೆ ಯಾವ ರೀತಿ ಇದೆ ಎಂದು ಯೋಚಿಸ ಬೇಕಾಗಿದೆ. ವಿಶ್ವ ಮಟ್ಟದಲ್ಲಿ ಭಾರತದ ಕುಸ್ತಿಯನ್ನು ವಿಸ್ತರಿಸಬೇಕಾದ ಕುಸ್ತಿ ಫೆಡರೇಷನ್ ಅಧ್ಯಕ್ಷ ಅವಕಾಶಕ್ಕಾಗಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ ಇಂತಹವರ ಪರವಾಗಿ ಹಲವರು ಅಂದು ಹಿಂದೂ ಕೋಡ್ ಬಿಲ್ ಅನ್ನು ವಿರೋಧಿಸಿದವರು ಇಂದು ಬ್ರಿಜ್‍ಭೂಷಣ್ ಪರ ನಿಂತಿದ್ದಾರೆ ಎಂದರು.
ಈ ಪ್ರಕರಣದಲ್ಲಿ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು ಎಂದು ಜನತಂತ್ರ ಜಾಗೃತಿ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಜಿಲ್ಲಾ ಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆಂಪುಗೌಡ, ಪೆÇ್ರ.ಶಬ್ಬೀರ್ ಮುಸ್ತಫಾ, ಚೋರನಹಳ್ಳಿ ಶಿವಣ್ಣ, ಪೆÇ್ರ.ಕಾಳಚನ್ನೇಗೌಡ, ಹೊಸಕೋಟೆ ಬಸವರಾಜು, ಎಐಡಿವೈಒ, ಎಐಐಎಂಎಸ್‍ನ ಮುಖಂಡರು ಇನ್ನಿತರರು ಉಪಸ್ಥಿತರಿರು.