ಬ್ರಿಜ್ ಕಮ್ ಬ್ಯಾರೇಜ್ ಗೇಟ್ ಗಳನ್ನು ತೆರೆದಿಡುವರಿಂದ ರೈತರಿಗೆ ತೊಂದರೆಯಾಗುತ್ತಿದೆ : ಕರವೇ ಮನವಿ

ಕಾಳಗಿ.ಜು.16: ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಹತ್ತಿರ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ಗಳನ್ನು ತೆರೆದಿಡುವುದರಿಂದ ನೀರಾವರಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಹತ್ತಿರ ಇರುವ ನದಿಯ ನೀರಿನಿಂದ ಅಂದಾಜು 1500 ಎಕರೆ ಜಮೀನು ನೀರವರಿಯಾಗಿದ್ದು. ಇದರಲ್ಲಿ ಮರಿಗಾವಲಿ ಮುಖಾಂತರ ಅಂದಾಜು 300 ಎಕರೆ ಜಮೀನಿಗೆ ನೀರು ಹೋಗುತ್ತದೆ. ಅಲ್ಲದೆ ಅಂದಾಜು 70 ಜನ ರೈತರು ನೀರಾವರಿ ಪಂಪ್ ಸೆಂಟ್ ಕೂಡಿಸಿ ನೀರಾವರಿ ಮಾಡುತ್ತಿದ್ದು ಹಲವಾರು ರೈತರು ನೀರಿನಿಂದ ದಿನನಿತ್ಯ ಕಾರ್ಯಕೆಲಸವನ್ನು ಮಾಡುತ್ತಾರೆ.

ಆದರೆ ಈಗ ದೇವಸ್ಥಾನ ಹತ್ತಿರ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ನೀರು ಹೊರಗಡೆ ಬಿಟ್ಟಾಗ ರೈತರ ಹೊಲಗಳಿಗೆ ನೀರು ಸಿಗುವುದಿಲ್ಲ. ಊರಿನ ಜನರಿಗೆ ನೀರು ತೊಂದರೆಯಾಗುತ್ತದೆ. ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಬರುವ ಮೊದಲೇ ಸ್ಥಳಕ್ಕೆ ಬಂದು ನೋಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಸಂಚಾಲಕ ಬಾಬು ನಾಟೀಕಾರ, ತಾಲೂಕು ಉಪಾಧ್ಯಕ್ಷ ಕಾಳಶೆಟ್ಟಿ ಬೆಳಗುಂಪಿ, ಗ್ರಾಮದ ರೈತರಾದ ಶಿವರಾಯ ಬೊಮ್ಮಾಣಿ, ಸೂರ್ಯಕಾಂತ ಮಂತಾ, ರಾಜಶೇಖರ ದೋಟೀಕೊಳ, ಮಲ್ಲಣ ಕುಡ್ದಳ್ಳಿ, ನಾಗಣ್ಣ ಕಡಬೂರ, ವಿಜಯಕುಮಾರ ಸುಂಠಾಣ, ಚಂದ್ರಕಾಂತ ದೋಟೀಕೋಳ,ಶರಣಪ್ಪ ಮಳಗಿ ಸೇರಿದಂತೆ ಅನೇಕರು ಇದ್ದರು.