
ನವದಹಲಿ,ಆ.೪- ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ – ಬ್ರಿಕ್ಸ್ ವಿಸ್ತರಣೆಯನ್ನು ಭಾರತ ವಿರೋದಿಸಲಾಗುತ್ತಿದೆ ಎನ್ನುವುದು ಆಧಾರ ರಹಿತ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಬ್ರಿಕ್ಸ್ ವಿಸ್ತರಣೆಯನ್ನು ಭಾರತ ವಿರೋಧಿಸುತ್ತದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದು ಊಹಾಪೋಹ ಎಂದು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಅರ್ಜೆಂಟೀನಾ, ಇರಾನ್, ಇಂಡೋನೇಷ್ಯಾ ಮತ್ತು ಕಝಾಕಿಸ್ತಾನ್ ದೇಶಗಳು ಗುಂಪಿಗೆ ಸೇರಲು ತೀವ್ರ ಆಸಕ್ತಿ ತೋರಿಸಿವೆ.ಇದಕ್ಕೆ ಭಾರತ ವಿರೋಧಿಸುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ, ಭಾರತ ವಿಸ್ತರಣೆ ವಿರೋಧಿಸುತ್ತದೆ ಎಂಬ “ಆಧಾರ ರಹಿತ” ವರದಿಗಳನ್ನು ಅವರು ತಳ್ಳಿಹಾಕಿದ್ಧಾರೆ.
ಆಗಸ್ಟ್ ೨೨ ರಿಂದ ೨೪ ರವರೆಗೆ ನಡೆಯಲಿರುವ ಐದು ರಾಷ್ಟ್ರಗಳ ಗುಂಪಿನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಹಾಜರಾತಿ ಕುರಿತು ನವದೆಹಲಿ ಇನ್ನೂ ಅಂತಿಮ ನಿರ್ಧಾರ ತೆಗದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ಧಾರೆ.
“ವಿಸ್ತರಣೆ ವಿರುದ್ಧ ಭಾರತ ಮೀಸಲಾತಿ ಹೊಂದಿದೆ ಎಂಬ ಕೆಲವು ಆಧಾರರಹಿತ ಊಹಾಪೋಹಗಳನ್ನು ನಾವೂ ಗಮನಿಸಿದ್ದೇವೆ. ಆದರೆ ಇದು ನಿಜವಲ್ಲ” ಎಂದು ಹೇಳಿದ್ಧಾರೆ.
ಭಾರತದ ನಿಲುವಿನ ಬಗ್ಗೆ ಮಾತನಾಡಿದ್ದೇವೆ ಮತು ಈ ಹಿಂದೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಕಳೆದ ವರ್ಷ ನಾಯಕರು ಆದೇಶದಂತೆ, ಬ್ರಿಕ್ಸ್ ಸದಸ್ಯರು ಬ್ರಿಕ್ಸ್ ವಿಸ್ತರಣೆ ಪ್ರಕ್ರಿಯೆಯ ಮಾರ್ಗದರ್ಶಿ ತತ್ವಗಳು, ಮಾನದಂಡಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳ ಆಧಾರದ ಮೇಲೆ ಆಂತರಿಕವಾಗಿ ಚರ್ಚಿಸುತ್ತಿದ್ದಾರೆ. ಪೂರ್ಣ ಸಮಾಲೋಚನೆ ಮತ್ತು ಒಮ್ಮತದ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಗುಂಪನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾಸ್ಕೋದಲ್ಲಿ ಹೇಳಿದ್ದಾರೆ.