ಬ್ರಾಹ್ಮಣ ಸಮಾಜ : ಆಹಾರ ಕಿಟ್ ವಿತರಣೆ

ರಾಯಚೂರು.ನ.೧೩- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ದಿನಸಿ ಆಹಾರ ಕಿಟ್ ಗಳನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಬೆಂಗಳೂರು ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ ವಕೀಲರ ಅಧ್ಯಕ್ಷತೆಯಲ್ಲಿ ನ.೧೨ ರಂದು ಯರಗೇರಾ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದಿನಸಿ ಆಹಾರ ಕಿಟ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿಯವರ ಅವಿರತ ಶ್ರಮ ಹಾಗೂ ಪ್ರಯತ್ನದಿಂದ ಕೊರೊನಾ ಮಹಾಮಾರಿಯಿಂದ ಅನೇಕ ಬ್ರಾಹ್ಮಣ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಲುಕಿದ್ದು, ಅಂತಹ ಬಡ ಕುಟುಂಬಗಳಿಗೆ ದಿನಸಿ ಆಹಾರ ಕಿಟ್‌ಗಳನ್ನು ತರುವಲ್ಲಿ ಅಧ್ಯಕ್ಷರ ಕಾರ್ಯವನ್ನು ಪ್ರಶಂಸಿದರು. ಪ್ರತಿಯೊಬ್ಬ ಬಡ ಬ್ರಾಹ್ಮಣ ವಿದ್ಯಾರ್ಥಿಗಳು ಈಡಬ್ಲ್ಯೂಎಸ್ ಸರ್ಟೀಫಿಕೇಟ್ ತೆಗೆದುಕೊಳ್ಳಬೇಕು ಅಭಿವೃದ್ಧಿ ಮಂಡಳಿಯ ಅನೇಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾಂದೀಪನಿ ಯೋಜನೆಯ ಸದುಪಯೋಗವನ್ನು ಪ್ರತಿ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ ವಕೀಲರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ನಗರಾಧ್ಯಕ್ಷರಾದ ಗುರುರಾಜ ಚಾರ್ಯಜೋಷಿ ತಾಳಿಕೋಟೆ, ಶಾಮಚಾರ ಗಾಣದಾಳ, ಗೋಪಾಲಕೃಷ್ಣ ತಟ್ಟಿ, ಡಾ.ಲಕ್ಷೀಕಾಂತ ಬಿಜನಗೇರಾ, ಜಿ.ಬಿ. ಕುಲಕರ್ಣಿ, ವಿಜಯರಾವ ಕುಲಕರ್ಣಿ, ಕಿಷನ ರಾವ್ ಕುಲಕರ್ಣಿ, ನರಸಿಂಗರಾವ್ ಚಂದ್ರಬಂಡಾ, ಅನಿಲ ಕುಮಾರ, ಪ್ರಹ್ಲಾದ ಗೋನವಾರ, ಪಾಂಡುರಂಗ ಕುರ್ಡಿಕರ್ ಹಾಗೂ ಬ್ರಾಹ್ಮಣ ಸಮಾಜದ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.