ಬ್ರಾಹ್ಮಣ ಸಮಾಜದ ವತಿಯಿಂದ ಆಹಾರ ಕಿಟ್ ವಿತರಣೆ

ಆಳಂದ ;ಜೂ.2: ಕೊರೊನಾ ಸೋಂಕಿನಿಂದ ಮೇಲಿಂದ ಮೇಲೆ ಲಾಕಡೌನ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರು, ಆರ್ಥಿಕ ಹಿಂದುಳಿದ ವರ್ಗದವರು ತೊಂದರೆ ಅನುಭವಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಹಾಗೂ ಇತರೆ ಸಮಾಜದವರಿಗೂ ಆಹಾರ ಕಿಟಗಳನ್ನು ವಿತರಿಸಲಾಗಿದೆ ಎಂದು ಸಮಾಜ ಮುಖಂಡ ರಾಘವೇಂದ್ರ ಕುಲಕರ್ಣಿ ತಡಕಲ್ ಅವರು ತಿಳಿಸಿದ್ದಾರೆ.

ಪಟ್ಟಣದ ನಗರೇಶ್ವರ ರಾಮ ಮಂದಿರದಲ್ಲಿ ಸುಮಾರು 66 ಜನರಿಗೂ ಆಹಾರ ಕಿಟಗಳನ್ನು ವಿತರಿಸಲಾಗಿದೆ. ಇದರಲ್ಲಿ ಆರ್ಥಿಕ ಹಿಂದುಳಿದ ಮತ್ತು ಕೂಲಿ ಕಾರ್ಮಿಕರನ್ನು ಗುರುತಿಸಿ ಆಹಾರ ಕಿಟಗಳನ್ನು ವಿತರಿಸಿದ್ದೇವೆಂದು ಅವರು ಹೇಳಿದ್ದಾರೆ.

ಮುಖಂಡರಾದ ವಿಜಯಕುಮಾರ ಚಿಟ್ಟಗೂಪಕರ, ಕಿಶೋರ ದೇಶಪಾಂಡೆ, ರತ್ನಕಾರ ಗುರುಜರ, ವಿಜಯಕುಮಾರ ಕೋಥಳಿಕರ, ಪ್ರಕಾಶ ಕುಲಕರ್ಣಿ, ದಿಗಂಬರಾರ ಕುಲಕರ್ಣಿ, ಸಂಜಯ ಕುಲಕರ್ಣಿ, ವಿಲಾಸ ಪೋತ್ನನಿಸ್, ಮೋಹನರಾವ ಕುಲಕರ್ಣಿ, ಭೀಮು ರಾಜೋಳಕರ, ರಾಘವೇಂದ್ರ ಪೋದ್ದಾರ, ಗೋವಿಂದ ತೀರ್ಥ, ರಾಘು ಜೋಶಿ, ಹಣಮಂತ ಕುಲಕರ್ಣಿ ಖಜೂರಿ, ಸೇರಿದಂತೆ ಪ್ರಮುಖರು ಆಹಾರ ಕಿಟ್ ಕಾರ್ಯಕ್ರಮ ಪಾಲ್ಗೊಂಡಿದರು.