ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗರ ಖಂಡನೆ; ಪ್ರತಿಭಟನೆ


ದಾವಣಗೆರೆ.ನ.೧೯: ಬ್ರಾಹ್ಮಣ ಮತ್ತು ಬ್ರಾಹ್ಮಣ ಸಮಾಜದ ವಿರುದ್ಧ ಸಿದ್ದರಾಮಯ್ಯ ಆಪ್ತ  ಮಲ್ಲೇಶ್ ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ  ಬ್ರಾಹ್ಮಣ ಸಮಾಜ ಬಾಂಧವರು  ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ
ಬ್ರಾಹ್ಮಣರ ವಿರುದ್ಧ ಅನವಶ್ಯಕವಾಗಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮೈಸೂರಿನಲ್ಲಿ ಇತ್ತೀಚೆಗೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಆಪ್ತನೆಂದು ಗುರುತಿಸಿಕೊಂಡಿರುವ ಪಾ. ಮಲ್ಲೇಶ ಎಂಬ ಒಬ್ಬ ವ್ಯಕ್ತಿ ಸಮಾಜದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆಯನ್ನು ಯಾರೂ ನಂಬಬಾರದು ಎಂದು ಹೇಳಿ ಬ್ರಾಹ್ಮಣರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ ಇದು ಅತ್ಯಂತ ಖಂಡನಾರ್ಹ, ಸರ್ವಜನರ ಹಿತವನ್ನು ಬಯಸುವ ಮತ್ತು ಶಾಂತಿ ಪ್ರಿಯರಾದ ಬ್ರಾಹ್ಮಣರ ವಿರುದ್ಧ ಅನಾವಶ್ಯಕವಾಗಿ ನಾಲಿಗೆ ಹರಿಬಿಟ್ಟಿರುವುದು ಖಂಡನೀಯ. ಬ್ರಾಹ್ಮಣರ ಸ್ವಾಭಿಮಾನವವನ್ನು ಕೆಣಕುವ ಮತ್ತು ಸಮಾಜದ ಶಾಂತಿ ಮತ್ತು ಸೌಹಾರ್ಧತೆಯನ್ನು ಹಾಳುಮಾಡುವ ಹೇಳಿಕೆಯನ್ನು  ಹಿಂಪಡೆದು ಹಾಗೂ ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಹಾಗೂ ಇಂತಹ ಸಮಾಜಘಾತುಕರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪಾ.ಮಲ್ಲೇಶ ಹೇಳಿಕೆಯ ಕುರಿತು ಸಿದ್ದರಾಮಯ್ಯ ಜಾಣ ಮೌನ ವಹಿಸಿದ್ದು, ಇದನ್ನು ಅಲ್ಲಗಳೆದಿಲ್ಲ . ಸಿದ್ದರಾಮಯ್ಯ ಶೇ 10% ಮಿಸಲಾತಿಯನ್ನು ವಿರೋಧಿಸಿ ಹೇಳಿಕೆ ನೀಡಿದ್ದಾರೆ ಹಾಗೂ ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆಯನ್ನು ದ್ವೇಷಿಸುವ ನಡೆ ತೋರಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಿ.ಸಿ. ಶ್ರೀನಿವಾಸ್, ಅನಿಲ್ ಬಾರಂಗಳ್,ಡಾ.ಆನಂದ ತೀರ್ಥಾಚಾರ್,ಡಾ.ಸುರೇಶ್ ಬಾಬು,ಸರೋಜ ದಿಕ್ಷೀತ್,ರಾಮಚಂದ್ರರಾವ್,ವೀಣಾ ಸುರೇಶ್,ಅನಿತಾ ವಾಸು,ಶ್ರೀಕಾಂತ್ ಎಂ.ಜಿ,ಕೃಷ್ಣಾಚಾರ್,ಪಿ.ಸಿ ರಾಮನಾಥ್,ಬದ್ರಿಪ್ರಸಾದ್,ವಿನಯ್ ಪದಕಿ,ರಾಘವೇಂದ್ರ ಮತ್ತಿತರರಿದ್ದರು.