ಬ್ರಾಹ್ಮಣ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ತಾಳಿಕೋಟೆ:ನ.20: ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಭೀಮರಾವ್ ಕುಲಕರ್ಣಿ ಕೊಡಗಾನೂರುರವರನ್ನು ತಾಳಿಕೋಟೆಯ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಇತ್ತಿಚಗೆ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ 11 ಜನರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಮರಾವ್ ಕುಲಕರ್ಣಿ, ಕಾರ್ಯದರ್ಶಿಯಾಗಿ ಶ್ರೀಪಾದಭಟ್ಟ ಜೋಷಿ, ಖಜಾಂಚಿಯನ್ನಾಗಿ ಮಾಣಿಕರಾವ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಯಿತು. ಇದರ ಜೊತೆಗೆ 11 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ರಮೇಶ ಕುಲಕರ್ಣಿ (ಕುಳಗೇರಿ), ಶ್ರೀಪಾದಭಟ್ಟ ಜೋಷಿ, ಮಾಣಿಕರಾವ ಕುಲಕರ್ಣಿ, ಯಲಗುರೇಶಾಚಾರ್ಯ ಚಬನೂರ, ವೇಂಕಟೇಶಾಚಾರ್ಯ ಗ್ರಾಮಪುರೋಹಿತ, ಸುನಿಲ್ ಕುಲಕರ್ಣಿ, ಗಿರೀಶ ಯಾದವಾಡ, ಹಣಮೇಶ ಕುಲಕರ್ಣಿ (ತುಂಬಗಿ), ಮಲ್ಹಾರಿರಾವ್ ಕುಲಕರ್ಣಿ, ಗುರುರಾಜ ಕುಲಕರ್ಣಿ (ಕಾಮನಟಗಿ), ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ವೇ.ವಸಂತಭಟ್ಟ ಜೋಶಿ ಅವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಹಿಂದಿನ ಕಾರ್ಯದರ್ಶಿಗಳಾದ ಭೀಮರಾವ್ ಕುಲಕರ್ಣಿ, ಗುರುದತ್ತ ಕುಲಕರ್ಣಿರವರ ಅವಧಿಯಲ್ಲಿ ನಡೆದ ಕಾರ್ಯ ಸಾಧನೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗೋಜಿ ಕುಲಕರ್ಣಿ, ಶೇಷಗಿರಿ ದೇಶಪಾಂಡೆ ನಾಗೂರು, ಶ್ರೀಪಾದ ಜೋಷಿ ಮತ್ತು ಹಣಮೇಶ ಕುಲಕರ್ಣಿ, ಮೊದಲಾದವರು ಇದ್ದರು.