ಬ್ರಾಹ್ಮಣ ಸಮಾಜ:ಗಾಯತ್ರಿ ಭವನ ಶಾಸಕ ಕಾಮಗಾರಿ ಪರಿಶೀಲನೆ

ರಾಯಚೂರು.ಜು.೦೭-ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಅವರು ಬ್ರಾಹ್ಮಣ ಸಮಾಜದ ಗಾಯತ್ರಿ ಭವನ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
ಅವರಿಂದು ನಗರದ ನವೋದಯ ಆಸ್ಪತ್ರೆಯ ಹತ್ತಿರ ಇರುವ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಗಾಯತ್ರಿ ಭವನದ ಕಟ್ಟಡ ಕಾಮಗಾರಿಯನ್ನು ಪ್ರಗತಿ ಪರಿಶೀಲಿಸಿ ಕಟ್ಟಡದ ಕಾಮಗಾರಿ ಕುರಿತು ತಾಂತ್ರಿಕ ಅಭಿಯಂತರ ಅಧಿಕಾರಿಗಳೊಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಆರ್.ಡಿ.ಎ.ಅಧ್ಯಕ್ಷ ವೈ.ಗೋಪಾಲ ರೆಡ್ಡಿ,ನಗರಸಭೆ ಸದಸ್ಯರುಗಳಾದ ನಾಗರಾಜ್,ರವೀಂದ್ರ ಜಲ್ದಾರ,ಕಡಗೋಲ್ ಆಂಜನೇಯ್ಯ,ತಿಮ್ಮಪ್ಪ ನಾಡಗೌಡ ,ಭೀಮಯ್ಯ ನಾಯಕ,ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಗನ್ನಾಥ ಕುಲಕರ್ಣಿ,ಗುರುರಾಜ್ ಆಚಾರ್ಯ ತಾಳಿಕೋಟೆ,ಗೋಪಾಲ ತಟ್ಟಿ, ಮುರಳಿಧರ ಕುಲಕರ್ಣಿ, ಹನುಮೇಶ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.