ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೪: ಬ್ರಾಹ್ಮಣ ಸಮಾಜದ ವತಿಯಿಂದ ಈಚೆಗೆ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿರುವ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಡಾ. ವೆಂಕಟಗಿರೀಶಾಚಾರ್ಯ ಮಾತನಾಡಿ, ಬ್ರಾಹ್ಮಣ ಸಮಾಜದ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಜೀವನದಲ್ಲಿ ಪ್ರಾಮಾಣಿಕತೆ ತುಂಬಾ ಅವಶ್ಯಕವಾಗಿದ್ದು, ನಮ್ಮ ನಡೆ-ನುಡಿಯಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ನಾಗರೀಕರಾಗಬಹುದು ಹಾಗೂ ತಮ್ಮ ಜೀವನವನ್ನು ಸೊಗಸಾಗಿ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಿಶಿಕಾಂತ್ ಮಾತನಾಡಿ, ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಅದರ ಮಹತ್ವವನ್ನು ತಿಳಿಸಿ ಮುಂದೆ ಉತ್ತಮ ಸಾಧನೆಗೈದು ತಂದೆತಾಯಿಗಳಿಗೆ, ಗುರುಹಿರಿಯರಿಗೆ ಹಾಗೂ ಈ ದೇಶಕ್ಕೆ ಒಳ್ಳೆಯ ಹೆಸರು ಬರುವಂತೆ ನಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ  ಎಸ್.ಪಿ.ಸತ್ಯನಾರಾಯಣರಾವ್, ಗೌರವ ಕಾರ್ಯದರ್ಶಿ ಎಸ್. ಗೋಪಾಲದಾಸ್ ಉಪಸ್ಥಿತರಿದ್ದರು, ರಾಮಚಂದ್ರರಾವ್ ಪರಿಚಯಿಸಿಸರು ಭಾಸ್ಕರ್ ಭಟ್ ಸ್ವಾಗತಿಸಿದರು, ಬಾಲಕೃಷ್ಣ ವೈದ್ಯ ವಂದಿಸಿದರು, ಡಿ. ಶೇಷಾಚಲ, ವಕೀಲರಾದ ರಾಮದಾಸ್, ಶ್ರೀಮತಿ ಅಡಿಗ, ಗೋಪಾಲಕೃಷ್ಣ, ಪೋಷಕರು ಮತ್ತು ಪುರಸ್ಕೃತ ವಿದ್ಯಾರ್ಥಿಗಳು ಭಾಗವಹಿಸಿದ್ದರು