ಕಲಬುರಗಿ,ಜೂ 16: ಕರ್ನಾಟಕ ಸರಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಹಲವಾರು ದಶಕಗಳಿಂದ ನಿರಂತರ ಸಮಾಜ ಸೇವೆಗೈಯುತ್ತಿರುವ ಆರ್ಥಿಕ ಹಾಗೂ ಧಾರ್ಮಿಕ ಚಿಂತಕರಾದ ವಿಜಯಪುರದ ರಾಘವೇಂದ್ರ ಅಲಗೂರ ಅವರನ್ನು ನೇಮಿಸಬೇಕೆಂದು ಉತ್ತರ ಕರ್ನಾಟಕದ ವಿವಿಧ ಸಂಘ ಸಂಸ್ಥೆಗಳು, ಬ್ರಾಹ್ಮಣ ಮುಖಂಡರು ಒತ್ತಾಯಿಸಿದ್ದಾರೆ.
ಅಂದಿನ ಮುಖ್ಯಮಂತ್ರಿ ಗುಂಡೂರಾವ ಅವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಮತ್ತು ಜಾತ್ಯತೀತ ಮೌಲ್ಯಗಳನ್ನು ಪ್ರದರ್ಶಿಸಿ ರಾಜಕೀಯದಲ್ಲಿ ವಿಶ್ಲೇಷಕನಾಗಿ ಅಮೂಲ್ಯವಾದ ಸೇವೆಗೈಯುತ್ತಿದ್ದಾರೆ. ನಿವೃತ್ತ ಹಿರಿಯ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆಸಲ್ಲಿಸಿ, , ವ್ಯವಸ್ಥಾಪಕ ಮತ್ತು ಆಡಳಿತ ಕೌಶಲ್ಯಗಳನ್ನು ಹೊಂದಿರುವ, 1980 ರಲ್ಲಿ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿ ಸಮುದಾಯದ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಹರಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ.ಅಲಗೂರು ಅವರು ಅರ್ಚಕ ಮತ್ತು ಪುರೋಹಿತರ, ಸಮಾಜದ ವಧು ವರರ ಸಮಸ್ಯೆ ಆರೋಗ್ಯ ವಿಮೆ, ಅಭಿವೃದ್ಧಿ ಮಂಡಳಿಯ ಈಗಿರುವ ಕಠಿಣ ನಿಯಮಗಳನ್ನು ಸರಳೀಕರಣಗೊಳಿಸಿ, ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಯೋಜನೆಗಳನ್ನು ರೂಪಿಸುವ ದೂರದೃಷ್ಟಿಯುಳ್ಳವರಾಗಿದ್ದಾರೆ. ಕೇಂದ್ರ ಸರ್ಕಾರದ ಇ ಡಬ್ಲ್ಯೂ ಎಸ್ ಮೀಸಲಾತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಅನುಷ್ಠಾನಗೊಳಿಸುವ ಕನಸು ಹೊತ್ತಿರುವ ರಾಘವೇಂದ್ರ ಅಲಗೂರು ಅವರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕಲ್ಪಿಸಿ ಕೊಡಬೇಕೆಂದು ವಿಪ್ರಸಮಾಜದ ಅಭಿಪ್ರಾಯ.