ಬ್ರಾಹ್ಮಣರಿಗೆ ಲಘುವಾಗಿ ಮಾತನಾಡಿರುವ ಫಾ ಮಲ್ಲೇಶ ಬಂಧನಕ್ಕೆ ಆಗ್ರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.17: ಬ್ರಾಹ್ಮಣರ ಬಗ್ಗೆ ಲಘುವಾಗಿ ಮಾತನಾಡಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಪ್ತ ಪಾ, ಮಲ್ಲೇಶ ಅವರನ್ನು ಬಂಧಿಸಬೇಕು ಎಂದು.ಬ್ರಾಹ್ಮಣ ಅಭಿವೃದ್ಧಿ ಮಂಡಳಿ  ಅಧ್ಯಕ್ಷ   ಸಚ್ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ
ಅವರು ನಿನ್ನೆ ಸಂಜೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಿದ್ದರಾಮಯ್ಯನವರ ಕುರಿತ ಕೃತಿ ಬಿಡುಗಡೆ ಸಮಾರಂಭದಲ್ಲಿ  ಪಾ. ಮಲ್ಲೇಶ ಅವರು ಬ್ರಾಹ್ಮಣರಿಂದ  ಈ ದೇಶ ಹಾಳಾಗುತ್ತಿದೆ.‌ ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆಯನ್ನು ನಂಬಬಾರದು. ಜೊತೆಗೆ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮಠಗಳನ್ನು ಕಟ್ಟಿಕೊಂಡು ಡಿಮ್ಯಾಂಡ್ ಮಾಡುತ್ತಾರೆ.
ವೇದ ಉಪನಿಷತ್ ಗಳ ಹೆಸರೇಳಿ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಇದ್ದ ಸಿದ್ದರಾಮಯ್ಯ ಅವರು  ಮೌನವಹಿಸಿದ್ದನ್ನು ನೋಡಿದರೆ ಇದಕ್ಕೆ ಅವರ ಕುಮ್ಮಕ್ಕು ಇದೆ ಎನಿಸುತ್ತದೆ.
ಆರ್ಥಿಕವಾಗಿ‌ ಹಿಂದುಳಿದ  ಬ್ರಾಹ್ಮಣರಿಗೆ ಶೇ 10 ಮೀಸಲಾತಿಗೆ ವಿರೋಧ ಮಾಡಿದ್ದಾರೆ. ರಾಹುಲ್ ಅವರು ಜನಿವಾರ ಹಾಕಿಕೊಂಡು ನಾನು ಕಾಶ್ಮೀರ ಪಂಡಿತನ ಮೊಮ್ಮಗ ಎನ್ನುವಾಗ ಮೌನ ಏಕೆ.
ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದನ್ನು ಬಿಡಿ ಎಂದು ಆಗ್ರಹಿಸಿದ ಅವರು. ಪಾ ಮಲ್ಲೇಶ ಅವರು ಹೇಳಿಕೆ ಹಿಂಪಡೆಯಬೇಕು ಮತ್ತು ಬ್ರಾಹ್ಮಣ ಜಾತಿಯನ್ನು ನಿಂದಿಸಿದ ಅವರನ್ನು ಬಂಧಿಸಬೇಕು ಎಂದರು. ಅಲ್ಲದೆ ಈ ಬಗ್ಗೆ  ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬ್ರಾಹ್ಮಣರ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ರಾವ್, ಗೌರವ ಅಧ್ಯಕ್ಷ ಡಾ.ಸುಂದರ್, ಬ್ರಾಹ್ಣ ಸಂಘರ್ಷ ಸಮಿತಿಯ ವೇಣಿ ಲೋಕನಾಥ್, ಶ್ರೀನಾಥ್ . ಗುರುರಾಜ್,  ಕಲ್ಲುರಾವ್ ಮೊದಲಾದವರು ಇದ್ದರು.