ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಒತ್ತಾಯ

ದೇವದುರ್ಗ.ನ.11- ರಾಜ್ಯದಲ್ಲಿ ಬ್ರಾಹ್ಮಣರಿಗೆ ಶೇ.೧೦ರಷ್ಟು ಉದ್ಯೋಗ,ಶಿಕ್ಷಣ ಹಾಗೂ ಇತರೆ ಸೌಲಭ್ಯಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರ ಆದೇಶಿಸಿದೆ.ಕಾರಣ ಕೂಡಲೇ ಆನ್ ಲೈನ್ ಮುಖಾಂತರ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ) ತಾಲೂಕು ಘಟಕ ಒತ್ತಾಯಿಸಿದೆ.
ಪಟ್ಟಣದಲ್ಲಿ ಬ್ರಾಹ್ಮಣರ ಸಂಘಟನೆ ಪದಾಧಿಕಾರಿಗಳು ಬುಧವಾರ ಮಿನಿವಿಧಾನಸೌಧದಲ್ಲಿ ಶಿರಸ್ತೇದಾರ ಶ್ರೀನಿವಾಸ ಚಾಪಲ್‌ರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರಕಾರ ಅಧಿಸೂಚನೆ ಪ್ರಕಟಿಸಿ ತಿಂಗಳು ಕಳೆದರೂ ಇನ್ನೂ ತಾಲೂಕು ಮಟ್ಟದಲ್ಲಿ ಜಾರಿಯಾಗಿಲ್ಲ.ಸರಕಾರ ಆದೇಶಿಸಿದ್ದರೂ ಅಧಿಕಾರಿಗಳು ಆನ್ ಲೈನ್ ಮುಖಾಂತರ ಅರ್ಜಿ ಪಡೆಯದೇ ಇರುವದು ದೇವರು ವರ ಕೊಟ್ಟರೂ ಪೂಜಾರಿ ನೀಡಲಿಲ್ಲ ಎಂಬಂತಾಗಿದೆ.
ರಾಜ್ಯ ಸರಕಾರ ಜಾರಿಗೊಳಿಸಿರುವ ನಿಯಮದಂತೆ ಶೇ.೧೦ರಷ್ಟು ಮೀಸಲಾತಿಗೆ ಸಂಬಂಧಿಸಿದ ಬ್ರಾಹ್ಮಣ ಸಮುದಾಯದವನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಕೂಡಲೇ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದ ಹಾಗೂ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಯೋಜನೆಗಳನ್ನು ತಕ್ಷಣದಿಂದ ಜಾರಿಗೊಳಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಸಮಿತಿ ಹಿರಿಯ ಉಪಾಧ್ಯಕ್ಷ ಗಿರೀಶ ಕನಕವೀಡುರಾಯಚೂರ ,ತಾಲೂಕು ಸಮಿತಿ ಅಧ್ಯಕ್ಷ ಶಾಮರಾವ್ ಕುಲಕರ್ಣಿ ಹೆಮನೂರು,ಪ್ರಧಾನ ಕಾರ್ಯದರ್ಶಿ ತಿರುಮಲೇಶ ಆಚಾರ್ಯ ರಾಜಜೋಷಿ,ಮುಖಂಡರಾದ ಶ್ರೀನಿವಾಸರಾವ್ ವಕೀಲರು,ಶ್ರೀಧರರಾವ್ ದೇಸಾಯಿ ಜಾಲಹಳ್ಳಿ,ರಾಜೇಶ ಕುಲಕರ್ಣಿ,ಶಾಮರಾವ್ ಖಾನಾಪೂರ,ರಾಘವೇಂದ್ರ ರಾವ್ ಖಾನಾಪೂರ,ಸೀತಾಕಾಂತಾಚಾರ್ ಗುಡಿ ಗಬ್ಬೂರ,ವೆಂಕಟೇಶ ಆಚಾರ್ ಕಲ್ಮನಿ,ವೆಂಕಟೇಶ ಜೋಷಿ ಮುಂಡರಗಿ,ಪ್ರಾಣೇಶಾಚಾರ್ ರಾಜಜೋಷಿ ಹಾಗೂ ಇತರರು ಇದ್ದರು.