ಬ್ರಾಹ್ಮಣರಿಗೆ ಅವಹೇಳನ ಮಾಡಿಲ್ಲ: ಸ್ಪಷ್ಟನೆ

ಸಿರಿಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಬ್ರಾಹ್ಮಿನ್ಸ್ ಕೆಫೆ” ಧಾರಾವಾಹಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಮಾಡಿಲ್ಲ. ಧಾರಾವಾಹಿಯಲ್ಲಿ ಅಂತಹ ಯಾವುದೇ ಸನ್ನಿವೇಶಗಳು ಇಲ್ಲ ಎಂದು ಧಾರಾವಾಹಿ ತಂಡ ಸ್ಪಷ್ಟಪಡಿಸಿದೆ.

ನಿರ್ದೇಶಕ ಸಂಜೀವ್ ತಗಡೂರ್ ಮಾತನಾಡಿ, ಜಾತಿಯಲ್ಲಿ ನಾನೂ ಬ್ರಾಹ್ಮಣನೇ.ಜೊತೆಗೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಹುತೇಕ ಕಲಾವಿದರು ಬ್ರಾಹ್ಮಣರೇ ಹೀಗಿರುವಾಗ ನಮ್ಮ ಸಮುದಾಯದ ಬಗ್ಗೆ ಹೆಮ್ಮೆ ಇದೆ. ಇಂತಹುದರಲ್ಲಿ ಅವಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದರು.

ಕಲಾವಿದರಾದ ಶ್ರೀನಾಥ್ ವಸಿಷ್ಠ,ಮೇಘನಾ ಶಣೈ, ಜಗದೀಶ್ ಮಲ್ನಾಡ್, ರಾಮಸ್ವಾಮಿ ಗೌಡ, ರೂಪೇಶ್,ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಸೇರಿದಂತೆ ಇಡೀ ಚಿತ್ರತಂಡ ಯಾವುದೇ ಅವಹೇಳನಕಾರಿಯಾಗಿ ನಡೆದುಕೊಂಡಿಲ್ಲ ಎಂದು ಧ್ವನಿಗೂಡಿಸಿದರು

ಹಿರಿಯ ಕಲಾವಿದ ಶ್ರೀನಾಥ್ ವಸಿಷ್ಠ ಮತನಾಡಿ , ಕಲಾವಿದರಿಗೆ ಯಾವುದೇ ಜಾತಿ ಇಲ್ಲ. ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ. ಕೆಲವರು ನ್ಯಾಯಾಲಯಕ್ಕೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಬ್ರಾಹ್ಮಣ ಸಂಘಕ್ಕೆ ದೂರು ನೀಡುತ್ತೇವೆ ಎಂದಿದ್ದಾರೆ ನೀಡಲಿ ಎಲ್ಲಾ ಕಡೆ ಹೋಗಿ ಸ್ಪಷ್ಟನೆ ನೀಡಲು ನಾವಂತೂ ಸಿದ್ದರಿದ್ದೇವೆ ಎಂದು ಹೇಳಿದರು.

ಸಿರಿಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮಾತನಾಡಿ, ಧಾರಾವಾಹಿ ಪ್ರಸಾರ ಮಾಡುವ ಮುನ್ನ ಅದನ್ನು ಪರಿಶೀಲಿಸಿದ ನಂತರವೇ ಪ್ರಸಾರಕ್ಕೆ ಅನುಮತಿ ನೀಡಲಾಗುತ್ತಿದೆ. ಯಾವುದೇ ವಿವಾದ ಮಾಡುವ ಉದ್ದೇಶ ಧಾರಾವಾಹಿ ತಂಡಕ್ಕಾಗಿ ಅಥವಾ ವಾಹಿನಿಗಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಂಭಾಷಣೆ ಬರೆದಿರುವ ಎಂ.ಎಲ್ ಪ್ರಸನ್ನ, ಧಾರಾವಾಹಿ ನಿರ್ಮಾಪಕರಾದ ಗಾಯತ್ರಿ ಮತ್ತು ಸೆಲ್ವಂ ಧಾರಾವಾಹಿ ಕ್ರಮ ಸಮರ್ಥಿಸಿಕೊಂಡರು.