ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಹುಬ್ಬಳ್ಳಿ, ಆ.31: ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ಮಹಾನ ಪುರುಷ ಬ್ರಹ್ಮ ಶ್ರಿ ನಾರಾಯಣ ಗುರುಗಳಾಗಿದ್ದಾರೆ. ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದು ಸಮಾಜದ ಮುಖಂಡರಾದ ಸುರೇಶ ನಾಯ್ಕ ಹೇಳಿದರು.
ಇಂದು ತಾಲೂಕು ಆಡಳಿತಸೌಧದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮ ಶ್ರಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರ ಸಾಧನೆಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಬೇಕು. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಾದ ಪ್ರಕಾಶ ನಾಶಿ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಜಾತಿ ಭೇದವನ್ನು ತೊಡೆದು ಹಾಕಿದರು. ಮಕ್ಕಳಿಗೆ ಮಹಾನ ಪುರುಷರ ಜೀವನ ಚರಿತ್ರೆಯನ್ನು ತಿಳಿಸಬೇಕಾಗಿದೆ. ಇಂತಹ ಜಯಂತಿ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಮನದಟ್ಟು ಮಾಡಬೇಕು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಂದೀಪ ಪೂಜಾರಿ, ಐಶ್ವರ್ಯ ಪೂಜಾರಿ, ಸುನೀಲಕುಮಾರ ಡವಳಗಿ, ಪುನೀತ ನಾಯ್ಕ, ಅನಿಲ ಈಳಗೇರ, ಸ್ಪಂದನಾ ಈಳಗೇರ, ಮೇಘಾ ಈಳಗೇರ, ರೇಖಾ ಈಳಗೇರ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಸಿ.ಆರ್.ಡವಳಗಿ, ಪಿ.ಡಿ.ನಾಯ್ಕ, ಟಿ.ಡಿ.ನಾಯ್ಕ, ವಿವೇಕ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರೇಖಾ ಈಳಗೇರ ಪ್ರಾರ್ಥಿಸಿದರು. ಮಂಜುನಾಥ ಈಳಗೇರ ನಿರೂಪಿಸಿದರು. ಡಿ.ಎನ್.ನಾಯ್ಕ ವಂದಿಸಿದರು.