ಬ್ರಹ್ಮಾಕುಮಾರಿಸ್ ಸಂಸ್ಥೆಗೆ ನೂತನ ಮುಖ್ಯಸ್ಥೆಯಾಗಿ ದಾದಿ ರತನ್ ಮೋಹಿನಿ ನೇಮಕ

ಬೀದರ:ಮಾ.29: ಮಹಿಳೆಯರ ಸಾರಥ್ಯದಲ್ಲೇ ನಡೆಯುವ ಬೃಹತ್‌ ಆಧ್ಯಾತ್ಮಿಕ ಸಂಸ್ಥೆಯಾದ ಬ್ರಹ್ಮಕುಮಾರೀಸ್‌ ನ ನೂತನ ಆಧ್ಯಾತ್ಮಿಕ ಮುಖ್ಯಸ್ಥೆಯಾಗಿ ದಾದಿ ರತನ್‌ ಮೋಹಿನಿ (96) ಅವರು ನೇಮಕಗೊಂಡಿದ್ದಾರೆ.

ಮೌಂಟ್‌ ಅಬುವಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ(ಮಾ.11ರಂದು) ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ್‌ ಮೋಹಿನಿ ಅವರ ನಿಧನದಿಂದ ತೆರವಾದ ಸ್ಥಾನವನ್ನು ದಾದಿ ರತನ್‌ ಮೋಹಿನಿ ತುಂಬಲಿದ್ದಾರೆ.

ದಾದಿ ರತನ್‌ ಮೋಹಿನಿ ಅವರು ಸಂಸ್ಥೆಯ ಹೆಚ್ಚುವರಿ ಮುಖ್ಯ ಆಡಳಿತಗಾರರ ಹುದ್ದೆಯನ್ನೂ ನಿರ್ವಹಿಸಲಿದ್ದಾರೆ. ಬ್ರಹ್ಮಕುಮಾರೀಸ್‌ ಸಂಸ್ಥೆಯು 140 ದೇಶಗಳಲ್ಲಿ 8,000 ಸೇವಾ ಕೇಂದ್ರಗಳನ್ನು ಹೊಂದಿದೆ.