ಬ್ರಹ್ಮಾಕುಮಾರಿಯರಿಂದ ವಿಶ್ವ ಪರಿಸರ ದಿನಾಚರಣೆ

ಚಾಮರಾಜನಗರ, ಜೂ.05:- ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಇಂದು ಪ್ರಕಾಶ ಭವನದ ಆವರಣದಲ್ಲಿ ಗಿಡ ನೆಟ್ಟು, ಗಿಡ ನೆಡುವ ನಾಗ ಮತ್ತು ರಾಜು ಗಿಡರಕ್ಷಾಕ ವಚತಯಾರಿಸುವ ವೆಂಕಟೇಶ, ಪರಿಸರ ಪ್ರೇಮಿ ವೆಂಕಟೇಶರವರನ್ನು ಸನ್ಮಾನಿಸಿ ಪಾರಿತೋಷಕ ಸಂಭಾವನೆ ನೀಡಿ ಬ್ರಹ್ಮಾ ಭೋಜನವನ್ನು ತಿನ್ನಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಗಿಡ ನೆಟ್ಟು, ನೀರೆರದು ಮಾತನಾಡಿದ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿದಾನೇಶ್ವರೀಜಿ, ಪ್ರಕೃತಿಯ ಪತಿ ಪರಮಾತ್ಮದಾತಾ ಎಂದರೆ ಕೊಡುವವನಾಗಿದ್ದಾನೆ. ಅವನ ಮಕ್ಕಳು ಆತ್ಮಗಳು ಅವನಿಂದ ಪಡೆದು ಸೃಷ್ಟಿಯಲ್ಲಿ ಸತ್ಯಯುಗತ್ರೇತಾಯುಗದಲ್ಲಿ ಸುಖ ಕೊಡುವಂತಹ ಪಾತ್ರ ಮಾಡಿದವು. ದ್ವಾಪರಕಲಿಯುಗದಲ್ಲಿ ಲೋಭ ವೃತ್ತಿಯಿಂದ ಎಲ್ಲವೂ ನನಗೇ ಬೇಕು ಎಂಬ ಮನೋಭಾವದಿಂದ ದುಃಖ ಕೂಪಕ್ಕೆ ತನ್ನನ್ನು ದೂಡಿಕೊಂಡಿದ್ದಾನೆ ಎಂದು ವಿμÁದಿಸಿದರು.
ಪ್ರಕೃತಿಯಲ್ಲಿರುವ ಮರಗಿಡಗಳು ಪರೋಪಕಾರ ಮಾಡುತ್ತೇವೆಯೇ ಹೊರತು ಅಪಕಾರ ಎಂದೂ ಮಾಡುವುದಿಲ್ಲ. ಆದ್ದರಿಂದ ಅವುಗಳನ್ನು ಬೆಳೆಸಿ ಪೆÇೀಷಿಸಿ ರಕ್ಷಿಸುತ್ತಿರುವ ಏಕೈಕ ಸಮಾಜ ಸೇವಕ, ಪರಿಸರ ಪ್ರೇಮಿ ವೆಂಕಟೇಶ್‍ಎಂದು ಪ್ರಶಂಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ವೆಂಕಟೇಶ್ ನಗರದಲ್ಲಿ 10ಸಾವಿರಕ್ಕೂ ಹೆಚ್ಚು ಗಿಡ ನೆಟ್ಟುಇಂದು ಮರವಾಗಿ ಅನೇಕರಿಗೆ ನೆರಳು ಕೊಡುತ್ತಿರುವುದು ನನಗೆ ಆತ್ಮತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಸಂಗೀತ ಪ್ರೇಮಿರವಿಕುಮಾರ್ ತಾವೇ ರಚಿಸಿರುವ ಮಾದಪ್ಪನ ಹಾಡುಗಳನ್ನು ಹಾಡಿ ರಂಜಿಸಿದರು.
ನಿವೃತ್ತ ಅರಣ್ಯಾಧಿಕಾರಿ ಎಂ.ಬಿ.ಕೃಷ್ಣಮೂರ್ತಿ ಮಾತನಾಡಿತಾವು ತಮ್ಮ ಹುಟ್ಟು ಹಬ್ಬದ ದಿನಗಳಲ್ಲಿ 75 ನೇ ಇಸಿವಿಯಿಂದ ಪ್ರತಿ ವರ್ಷಎರೆಡೆರಡು ವೃಕ್ಷಗಳನ್ನು ನೆಟ್ಟು ಪೆÇೀಷಿಸುತ್ತಾ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಇಲ್ಲಿಂದ ಮೈಸೂರಿಗೆ ವರ್ಗಾವಣೆ ಹೊಂದಿದರಾಜಯೋಗ ವಿದ್ಯಾರ್ಥಿನಿ ಸರಸ್ವತಿಯಕ್ಕ ಮತ್ತು ಕುಟುಂಬಕ್ಕೆ ವರ್ಗದವರನ್ನು ಹೃದಯಸ್ಪರ್ಷಿಯಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ಬಿಕೆ ಆರಾಧ್ಯ, ಸತೀಶ್, ಶ್ರೀನಿವಾಸ, ಸರಳಾ, ಗೀತಾ,ಆಶಾ,ಪ್ರಮಿಳಾ, ಸುಲೋಚನ, ಸುಕನ್ಯಾ, ಸುವರ್ಣ,ಸುಧಾ, ಗೋವಿಂದರಾಜು, ಸುಂದರ್, ಶಿವಕುಮಾರ, ಲಕ್ಷ್ಮಿನರಸಿಂಹ ಪ್ರಸಾದ್, ನಾರಾಯಣಶೆಟ್ಟಿ, ಮಹೇಶ್ ಮುಂತಾದವರು ಹಾಜರಿದ್ದರು.