ಬ್ರಹ್ಮಾಂಡವೇ ಭಗವಂತನ ಶರೀರ

ಸತ್ತೂರು,18 : ಜಗತ್ತನ್ನು ನಿಯಮನ ಮಾಡುವ ಕೇಶವ, ಚೇತನ ಚೇತನಾತ್ಮಕ ಪ್ರಪಂಚದಲ್ಲಿರುವ ಬ್ರಹ್ಮಾದಿ ದೇವತೆಗಳಿಂದ ಹಿಡಿದು, ಸೂಕ್ಷ್ಮ ಇರುವೆ ವರೆಗೂ, ಸಮಸ್ತ ಪದಾರ್ತಗಳಿರುವ ಇಡೀ ಬ್ರಹ್ಮಾಂಡವೇ ಭಗವಂತನ ಶರೀರ. ಭಗವದ್ಗೀತೆ 13ನೇ ಅಧ್ಯಾಯ ಕ್ಷೇತ್ರ, ಕ್ಷೇತ್ರಜ್ಞ ವಿಭಾಗ ಯೋಗ, ಒಂದು ಅಪೂರ್ವ ಅಧ್ಯಾಯ ಈ ಹಿಂದೆ ಹೇಳಿದ 12 ಅಧ್ಯಾಯಗಳ ಸಾರಾಂಶಗಳನ್ನು ಸಂಗ್ರಹ ಮಾಡಿ ಸಂದೇಶ ನೀಡುತ್ತಿರುವ ಶ್ರೀ ಕೃಷ್ಣಾರ್ಜುನ ಸಂವಾದ ಎಂದು ಹುಬ್ಬಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರಾದ ಪಂ. ನರಹರಿ ಆಚಾರ ವಾಳವೇಕರ ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ಶ್ರೀ ಆನಂದ ಬಾಗಲ ಅವರ ನಿವಾಸದಲ್ಲಿ ಜರುಗಿದ ಬಳಗದ 9ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ನಡೆದ ಭಗವದ್ಗೀತಾ 13ನೇ ಅಧ್ಯಾಯದ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತಾ ಪ್ರಕೃತಿ ,ಪುರುಷ ,ಕ್ಷೇತ್ರ , ಕ್ಷೇತ್ರಜ್ಞ, ಜ್ಞಾನ , ಜ್ಞೆಯ (ವಸ್ತು) ಈ ಆರು ವಿಷಯಗಳ ಚಿಂತನೆ ಪ್ರತಿಪಾದನೆ ಮಾಡುವ ಶ್ರೀಕೃಷ್ಣ ಅರ್ಜುನರ ಸಂವಾದ13ನೇ ಅಧ್ಯಾಯ. ಮುಂದುವರೆದು, ಅಜು9ನನ ಪ್ರಶ್ನೆಗೆ ಉತ್ತರಿಸಿದ ಶ್ರೀ ಕೃಷ್ಣ ಪರಮಾತ್ಮ ಉತ್ತರಿಸುತ್ತ ಜ್ಞಾನದ ದಾರಿಯಲ್ಲಿ ಸರಳವಾಗಿ ಸಾಗಬೇಕಾದರೆ, ಭಗವಂತನನ್ನು ತಿಳಿಯಬೇಕಾದರೆ, ಅವನ ಲೋಕ ಮರಳಿ ಬಾರದ ಲೋಕ ಮೋಕ್ಷ ಹೊಂದಬೇಕಾದರೆ, ನಮ್ಮ ಜೀವನದಲ್ಲಿ ಹೊಗಳಿಕೆ, ಸಹನಾಶಕ್ತಿ , ಅಹಿಂಸಾ, ಶಾಂತಿ, ಆಚಾರ್ಯರ ಉಪಾಸನೆ, ನಿಷ್ಠೆ, ಶೌಚ , ಧೈರ್ಯ, ಶುದ್ಧ ಮನಸ್ಸು ಸತ್ಕಾರ್ಯಗಳ ಆಚರಣೆ, ಮನೋನಿಗ್ರಹ , ಇಂದ್ರಿಯ ನಿಗ್ರಹ , ಅನಹಂಕಾರ ,ವೈರಾಗ್ಯ ಮುಂತಾದವುಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಲು ಅಜು9ನನ ಮುಖಾಂತರ ನಮಗೆಲ್ಲ ಸುಂದರವಾದ ಸಂದೇಶ ಭಗವಂತ ನೀಡಿದ್ದಾನೆ ಎಂದರು.

ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮಚಂದ್ರನ ಗುಣಗಳನ್ನು ವಿಶೇಷವಾಗಿ ತ್ಯಾಗದ ಬಗ್ಗೆ ಸುಂದರವಾಗಿ ಉದಾಹರಣೆಗಳೊಂದಿಗೆ ವರ್ಣಿಸಿದರು ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿ ಅವರಿಂದ ಭಜನೆ ಮತ್ತು ಬಳಗದ ಸದಸ್ಯರಿಂದ ಹರಿವಾಯು ಗುರುಗಳ ಪಾರಾಯಣಾದಿಗಳು ಜರಗಿದವು.

ಕಾರ್ಯಕ್ರಮದಲ್ಲಿ ಶ್ರೀರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ ಜೋಶಿ, ರಮೇಶ್ ಅಣ್ಣಿಗೇರಿ, ಗೋಪಾಲ ಆಚಾರ್ಯರ ಹರಿಹರ, ಸಿ.ಕೆ ಕುಲಕರ್ಣಿ, ವಾಮನ ಭಾದ್ರಿ, ಉದಯ ದೇಶಪಾಂಡೆ, ಅನಿಲ ದೇಶಪಾಂಡೆ, ಸಂಜೀವ ಜೋಶಿ, ಕೇಶವ ಕುಲಕರ್ಣಿ, ಆನಂದ ದೇಶಪಾಂಡೆ, ಅಶೋಕ ಬಹದ್ದೂರ್ ದೇಸಾಯಿ, ಹನುಮಂತ ಪುರಾಣಿಕ, ಬದರಿನಾಥ್ ಬೆಟಿಗೇರಿ, ಎಸ್.ಎಂ ಜೋಷಿ, ಜಯತೀರ್ಥ ನಿರೋಗಲ, ಸಂಜೀವ ಗೊಳಸಂಗಿ, ಪ್ರಮೋದ ಶಿರಗುಪ್ಪಿ ಉಪಸ್ಥಿತರಿದ್ದರು.