ಬ್ರಹ್ಮಾಂಡದ ನಾಯಕ ಸುಗೂರು(ಕೆ) ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ ಚಕ್ರಸ್ನಾನದೊಂದಿಗೆ ಸಂಪನ್ನ

ಕಾಳಗಿ:ಅ.29: ತಾಲ್ಲೂಕು ಸಮೀಪದ ವಿಸ್ಮಯ ಭಕ್ತದ ನಾಡು‌ ಎಂದೆ ಪ್ರಸಿದ್ದಿ ಪಡೆದಿರುವ ಸುಗೂರು(ಕೆ) ಗ್ರಾಮದ ಬ್ರಹ್ಮಾಂಡ ನಾಯಕ ವೆಂಕಟೇಶ್ವರ ಸ್ವಾಮಿಯ ನವರಾತ್ರಿ ಬ್ರಹ್ಮೋತ್ಸವ ನಿಮಿತ್ತವಾಗಿ ನಡೆದ ಕಾರ್ಯಕ್ರಮಗಳಿಗೆ ಪವಿತ್ರವಾದ ಗಂಗಾಜಲದಲ್ಲಿ ಚಕ್ರಸ್ನಾನ ನೆರವೇರಿಸುವ ಮೂಲಕ ಸಂಪನ್ನಗೊಂಡಿತು.

ಪವಿತ್ರವಾದಗಂಗಾಜಲದಲ್ಲಿಉತ್ಸವ ಮೂರ್ತಿಗಳಿಗೆ ಚಕ್ರಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾತು. ನಂತರ ಚಕ್ರತೀರ್ಥದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಬ್ರಹ್ಮೋತ್ಸವ ಕಾರ್ಯವನ್ನು ದೇವಸ್ಥಾನದ ತಿರುಪತಿ ತಿರಿಮಲದ ಹಾಥಿರಾಮ ಮಠದ ಪೂಜ್ಯ ಕೃಷ್ಣ ದಾಸ ಮಹಾರಾಜ, ದೇವಸ್ಥಾನದ ಮುಖ್ಯಸ್ಥ ಪೂಜ್ಯ ಪವನದಾಸ ಮಹಾರಾಜರ ನೇತೃತ್ವದಲ್ಲಿ ‌ಒಂಬತ್ತು ದಿನಗಳ ಸ್ವಾಮಿಯ ಕಾರ್ಯಕ್ರಮವನ್ನು ತಿರುಪತಿಯ ವಿಧಿವಿಧಾನಗಳ ಮೂಲಕ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯನ್ನು ನೆರವೇರಿಸಿಲಾಯಿತು.

ಒಂಬತ್ತು ದಿನಗಳ ಕಾಲ ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರಿಗೆ, ಪಾಕ ಪ್ರವೀಣ ಸುಶೀಲ್ ಚತುರ್ವೇದಿ ಪ್ರಸಾದ ತಯಾರಿಸಿದರು.

ಈ ಬಾರಿ ಕರೋನ ಮಹಾಮಾರಿ ಹರಡಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಎಕಾಂತ ಬ್ರಹ್ಮೋತ್ಸವವು ಸರಳವಾಗಿ ಮಾಕ್ಸ್, ಸ್ಯಾನಿಟೈಸರ, ಸಾಮಾಜಿಕ ಅಂತರ ಕಾಯ್ದುಕೊಂಡು ಸಹಸ್ರಾರು ಭಕ್ತರು ಆಗಮಿಸಿ ಸ್ವಾಮಿಯ ಬ್ರಹ್ಮೋತ್ಸವ ಕಾರ್ಯಕ್ರಮದ ಸ್ವಾಮಿಯ ವಿವಿಧ ಅವರಾರದ ಮೂರ್ತಿಗಳ ದರ್ಶನ ಪಡೆದು ಸ್ವಾಮಿ ಕೃಪೆಗೆ ಪಾತ್ರರಾದರು.

ತಿರುಪತಿ ತಿರುಮಲದ ಹಾಥಿರಾಮ ಮಠದ ಪೂಜ್ಯ ಕೃಷ್ಣ ದಾಸ ಮಹಾರಾಜ, ದೆವಸ್ಥಾನದ ಮುಖ್ಯಸ್ಥ ಪೂಜ್ಯ ಶ್ರೀಪವನದಾಸ ಮಹಾರಾಜ, ಬಾಲಕದಾಸ ನಾಗಸಾಧು, ರವಿ ಶಾಸ್ತ್ರಿ, ಸುಬ್ರಮಣ್ಯಂ ಸ್ವಾಮಿ, ಶಿವಂ ಶಾಸ್ತ್ರಿ, ಬ್ರಹ್ಮಶ್ರೀ ಕೃಷ್ಣ, ದೇವಸ್ಥಾನ ಅರ್ಚಕ ಕೇಶವದಾಸ ಮಹಾರಾಜ, ಕಲಮನಯನ ಮಹಾರಾಜ, ಪರಮೇಶ್ವರ ಪಾಟೀಲ, ಸಿದ್ದು ಕೇಶ್ವರ, ದತ್ತಾತ್ರೇಯ ಮುಚ್ಚಟ್ಟಿ, ಚಂದ್ರಕಾಂತ ರೆಮ್ಮಣಿ, ಅಣ್ಣಾರಾವ ಗಡ್ಡಿ, ಶರಣಯ್ಯ ಮಡಪತ್ತಿ, ಮಾಣಿಕರಾವ ಪೋಲಿಸ್ ಪಾಟೀಲ, ಖೇಮು ರಾಠೋಡ, ಸಂಜಯಕುಮಾರ ರಾಠೋಡ ಉದಯಕುಮಾರ ಹದಪದ, ಶಿವಕುಮಾರ ಕುಂಬಾರ, ಮನೋಹರ್ ಚವ್ಹಾಣ, ನಾಗಪ್ಪ ಅಂಕನ, ನಿಂಗಯ್ಯ ಗುತ್ತೇದಾರ, ಹಣಮಂತರಾಯ ಮುಚ್ಚಟ್ಟಿ, ಇದ್ದರು.