ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಶಿರಹಟ್ಟಿ,ಸೆ17 : ತಾಲೂಕಿನ ಪರಸಾಪೂರ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕ ಆರ್ಯ ಈಡಿಗ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 166ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಶ್ರೀಕಾಂತ ಈಳಗೇರ ಮಾತನಾಡಿ, ಶಿಕ್ಷಣ, ಸಂಘಟನೆ ಹಾಗೂ ಸಂಸ್ಕಾರ ಈ ಮೂರು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುವದನ್ನು ಗುರುಗಳು ತೋರಿಸಿ ಕೊಟ್ಟಿದ್ದಾರೆ. ಗುರುಗಳ ಜಂಯತಿಯನ್ನು ಸರಕಾರದ ವತಿಯಿಂದ ಆಚರಿಸಲು ಪ್ರಾರಂಭಿಸಿದ ದಿನದಿಂದ ಸಮಾಜ ಹೆಚ್ಚು ಸಂಘಟಿತವಾಗುತ್ತಿದೆ. ಬ್ರಹ್ಮಸ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರಕಾರದ ಎಲ್ಲ ಇಲಾಖೆಗಳ ಕಚೇರಿಯಲ್ಲಿ ಆಚರಿಸುವಂತೆ ಆದೇಶವಿದೆ. ಅಧಿಕಾರಿಗಳ ಹಾಗೂ ರಾಜಕಾರಣಿಗಳ ಬೇಜಾವ್ದಾರಿಯಿಂದ ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪರಶುರಾಮ ಈಳಗೇರ, ಶರಣಪ್ಪ ಈಳಗೇರ, ಕಲ್ಲಪ್ಪ ಈಳಗೇರ, ನಿಂಗಪ್ಪ, ಹಾಲಪ್ಪ, ಶಶಿಕುಮಾರ, ಭೀಮಣ್ಣ ಈಳಗೇರ ಮುಂತಾದವರು ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಮಾಜದ ಪ್ರತಿ ಮನೆ ಮನೆಗೆ ತೆರಳಿ ಗುರುಗಳ ಭಾವಚಿತ್ರವನ್ನು ನೀಡಲಾಯಿತು.