`ಬ್ರಹ್ಮರಾಕ್ಷಸ’  ಟೀಸರ್ ಬಿಡುಗಡೆ

ಲೈಟ್‌ಮ್ಯಾನ್ ಆಗಿ  ಚಿತ್ರರಂಗಕ್ಕೆ ಬಂದ  ಶಂಕರ್.ವಿ. ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ “ಬ್ರಹ್ಮರಾಕ್ಷಸ”.  ಟೀಸರ್ ಬಿಡುಗಡೆಯಾಗಿದೆ. ಸದ್ಯ ಚಿತ್ರ ಸೆನ್ಸಾರ್ ಹಂತದಲ್ಲಿದೆ.  ನಿರ್ದೇಶಕ ಶಂಕರ್ ಮಾತನಾಡಿ ಸಿನಿಮಾಗೆ ಬರುತ್ತೇನೆ ಅಂದುಕೊಂಡೇ ಇರಲಿಲ್ಲ.

ಬಡತನದಲ್ಲೇ ಬೆಳೆದವನು.3 ಕಿರುಚಿತ್ರಗಳನ್ನು ಮಾಡಲು  ತಾಯಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಬ್ರಹ್ಮರಾಕ್ಷಸ 1980-90ರ ಸಮಯದಲ್ಲಿ  ನಡೆಯುವ ಒಂದು ಸೇಡಿನ ಕಥೆ , ಜೊತೆಗೊಂದು ಮೆಸೇಜ್ ಕೂಡ ಇದೆ.  3 ಜನ ಸಮಾಜಕ್ಕೆ ಒಳ್ಳೆಯದು ಮಾಡಲೆಂದು ಹೊರಟಾಗ ಏನೋ ಒಂದು ಘಟನೆ ನಡೆಯುತ್ತದೆ, ಇಲ್ಲಿ ನಾಯಕ ಹಾಗೂ ಬಿರಾದಾರ್ ಮಾವ ಅಳಿಯನಾಗಿ ಕಾಣಿಸಿಕೊಂಡಿದ್ದಾರೆ . ಚಿತ್ರದ 90 ರಷ್ಟು  ಭಾವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದ್ದು,  ಬಹುತೇಕ ಕಥೆ ಮಳೆಯಲ್ಲೇ ನಡೆಯುತ್ತದೆ ಎಂದರು.

ನಿರ್ಮಾಪಕ ಶ್ರೀನಿವಾಸ ಮಾತನಾಡಿ  ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್ ಇದೆ. ಇದರಲ್ಲಿ 5   ಹಾಡುಗಳಿವೆ.  ಜನರು ಚಿತ್ರವನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆಯಿದೆ. ಹೊಸಬರು ಗೆದ್ದರೆ ಇನ್ನೊಂದಷ್ಟು ಸಿನಿಮಾಗಳು ಬರುತ್ತವೆ ಎಂದರು.

ಏಕಲವ್ಯ ಮಾತನಾಡಿ 80ರ ದಶಕದಲ್ಲಿ ನಡೆವಂಥ ಕಥೆ. ಕಲಿವೀರ ಮಾಡುವಾಗಲೇ ಶಂಕರ್ ಪರಿಚಯವಾದರು. ನಿರ್ಮಾಪಕರಿಗೆ ಪರಿಚಯಿಸಿದೆ. ನಾವೆಷ್ಟೇ ಕಷ್ಟಪಟ್ಟಿದ್ದರೂ ತೆರೆಮೇಲೆ ನೋಡಿದಾಗ ಅದೆಲ್ಲ ಮರೆತುಹೋಗುತ್ತದೆ ಎಂದು ಭಾವುಕರಾದರು.

ಪಲ್ಲವಿಗೌಡ ಮಾತನಾಡಿ ಇಡೀ ಸಿನಿಮಾ  ರಾತ್ರಿಯಲ್ಲೇ ನಡೆಯುತ್ತೆ. ಅಂಕುಷ್ ಗರ್ಲ್ ಫ್ರೆಂಡ್ ಆಗಿ, ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.

ಹಿರಿಯ ನಟಿ ಭವ್ಯ ಮಾತನಾಡಿ ಚಿಕ್ಕ ಹೀರೋಗೆ ತಾಯಿಯ ಪಾತ್ರ ಮಾಡಿದ್ದೇನೆ. ನಿರ್ದೇಶಕ ಶಂಕರ್ ಎಲ್ಲಾ ವಿಭಾಗದಲ್ಲಿ ಪರಿಣತಿ ಪಡೆದು ನಿರ್ದೇಶಕನಾಗಿದ್ದಾರೆ. ಏಕಲವ್ಯ ತುಂಬಾ ಪ್ರತಿಭಾವಂತ,  ಎಂದು ಹೇಳಿದರು. ವೈಜನಾಥ್ ಬಿರಾದಾರ್ ಮಾತನಾಡಿ 30 ವರ್ಷ ಆದಮೇಲೆ ಮೊದಲಬಾರಿಗೆ  ದಾರಿಬಿಟ್ಟು ಮಾಡಿದ ಚಿತ್ರ ಎಂದು ಹೇಳಿದರು.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಸಿನಿಮಾ ಇಷ್ಟು ಚೆನ್ನಾಗಿ ಬರಲು ನಿರ್ಮಾಪಕರೇ ಕಾರಣ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ. ಏಕಲವ್ಯ ಪರ್ ಫಾರ್ಮನ್ಸ್ ನೋಡಿ ಜಾಕಿಚಾನ್ ನೆನಪಾದರು ಎಂದು ಹೊಗಳಿದರು. ಅನಿರುದ್ದ ಕ್ಯಾಮೆರಾವರ್ಕ್ ಈ  ಎಂ.ಎಸ್.ತ್ಯಾಗರಾಜ್ ಸಂಗೀತವಿಸೆ.

ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ. ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವಾರು ಕಲಾವಿದರಿದ್ದಾರೆ.