ಬ್ರಹ್ಮಪುರ ರಾಮಮಂದಿರದಲ್ಲಿ ರಾಮನವಮಿ

ಕಲಬುರಗಿ,ಏ 15: ನಗರದ ಬ್ರಹ್ಮಪುರ ರಾಮಮಂದಿರದಲ್ಲಿ ಶ್ರೀರಾಮ ದೇವರ ನವರಾತ್ರಿ ಉತ್ಸವ ಏ. 9 ರಿಂದ ಆರಂಭವಾಗಿದ್ದು, ಏ 18 ರಂದು ಸಂಪನ್ನಗೊಳ್ಳಲಿದೆ.
ನಾಳೆ ( ಏ.16 ಮಂಗಳವಾರ ) ಬೆಳಿಗ್ಗೆ 9 ಗಂಟೆಗೆ ವಿಷ್ಣು ಪಂಚಾಯತನ ಹೋಮ,ಸಂಜೆ 6 ಗಂಟೆಗೆ ಮಮತಾ ಜೋಶಿ ಅವರಿಂದ ಭಕ್ತಿರಸಮಂಜರಿ ಸಂಗೀತ ಕಾರ್ಯಕ್ರಮವಿದೆ. 17 ರಂದು ರಾಮನವಮಿಯಂದು ಬೆಳಿಗ್ಗೆ 6 ಗಂಟೆಗೆ ಮಹಾಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಶ್ರೀರಾಮ ಜನ್ಮೋತ್ಸವ,4 ಗಂಟೆಗೆ ಭಜನೆ, ಸಂಜೆ 6 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ .18 ರಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ ಮತ್ತು ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು ರಾಮಮಂದಿರದ ಅರ್ಚಕರಾದ ರಾಘವೇಂದ್ರ ಕೀಲಿ ಮತ್ತು ಸಕಲ ಸದ್ಭಕ್ತರು ತಿಳಿಸಿದ್ದಾರೆ.