ಬ್ರಹ್ಮಕುಮಾರಿ ಸಂಸ್ಥೆಯ ಅದ್ಯಕ್ಷರಾದ ಜಾನಕಿದಾದಿಯವರ ಸ್ಮøತಿದಿನ ಆಚರಣೆ

ವಿಜಯಪುರ, ಮಾ.28-ನಗರದ ಮೀನಾಕ್ಷಿ ಚೌಕದಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಾಲಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಾನಕಿದಾದಿಯವರ ಸ್ಮತಿದಿನದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿ.ಕೆ. ನಿಲೂಜಿ ಅಕ್ಕನವರು ಮುಖ್ಯ ಅತಿತಿಗಳಾಗಿ ಭಾಗವಹಿಸಿ ಮಾತನಾಡುತ್ತ, ಜಾನಕಿದಾದಿಯವರು ತಮ್ಮ 104 ವರ್ಷಗಳ ಜೀವನ ಪೂರ್ಣ ಒಳ್ಳೆಯ ಮಾರ್ಗಗಳನ್ನು ಜನರಿಗೆ ತಿಳಿಸುತ್ತಾ ಆದರ್ಶವಾದ ಜೀವನ ನಡೆಸುವದು ಹೇಗೆ ಎಂಬುದನ್ನು ತಿಳಿಸಿಕೊಟ್ಟವರು.
ಅಕ್ಕನವರು ದೇಶದ ನಾನಾ ಭಾಗಗಳಲ್ಲದೇ ವಿದೇಶಗಳಲ್ಲಿಯೂ ಸಹ ಬ್ರಹ್ಮಾಕುಮಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸುವುದರ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವರು ಸುಮಾರು 140 ದೇಶಗಳಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಹಾಗೂ ಸುಮಾರು 104 ವರ್ಷಗಳ ಕಾಲ ಜೀವಿಸಿದ ಅಕ್ಕನವರ ನೆನಪಿಗಾಗಿ ಮೌಂಟ್ ಅಬುನಲ್ಲಿ ಶಕ್ತಿಸ್ತಂಭ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಹಾಗೂ ವಿಜ್ಞಾನಿಗಳು ಜಗತ್ತಿನ ಅತ್ಯಂತ ಶಕ್ತಿಶಾಲಿ ಮನಸ್ಸುಳ್ಳ ಮಹಿಳೆ ಎಂದು ಬಿರುದನ್ನು ಸಹ ನೀಡಿದ್ದಾರೆ. ಹಾಗೂ ಅಮೀತಿ ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಪದವಿಯನ್ನು ನೀಡಿ ಇವರನ್ನು ಗೌರವಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಶಂಕರಗೌಡ ಪಾಟೀಲ, ಭೀಮಾಶಂಕರ ಬಿ.ಕೆ., ಬಿ.ಕೆ ಪುಷ್ಪಾ , ಬಿ.ಕೆ. ಸಂಗೀತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.