ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯ ಹಾಗೂ ಬಿ.ವಿ. ಭೂಮರಡ್ಡಿ ಪದವಿ ಕಾಲೇಜಲ್ಲಿ ಸಸಿ ನೆಡುವ ಹಾಗೂ ರಕ್ಷಾ ಬಂಧನ ಪರ್ವ

ಬೀದರ : ಆ.2: ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ ಪರ್ವ ಹಾಗೂ ಸಸಿ ನೆಡುವ ಕಾರ್ಯಕ್ರಮ ಕಲ್ಪತರೂ ಅಭಿಯಾನದ ಅಂಗವಾಗಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಉದ್ಘಾಟಿಸಿ ಮಾತನಾಡುತ್ತಾ ರಕ್ಷಾಬಂಧನ ಸಹೋದರ ಮತ್ತು ಸಹೋದರಿಯರ ನಡುವೆ ಪ್ರೀತಿ – ಪ್ರೇಮ ಮತ್ತು ವಿಶ್ವಾಸ ಅಭಿವೃದ್ಧಿ ಪಡಿಸುತ್ತದೆ ಹಾಗೂ ಬಂಧನ ಎಂದರೆ ನಾವೆಲ್ಲರೂ ದೇಶ ರಕ್ಷಣೆ ಕಾರ್ಯ ಮತ್ತು ಕುಟುಂಬದ ಗುರುಹಿರಿಯ ರಕ್ಷಣೆ ಮತ್ತು ಗೌರವ ಕೊಡುವುವಲ್ಲಿ ಗಮನವಹಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಬಿ.ಕೆ. ಪಾರ್ವತಿ ಬಹೇನಜಿ ಮಾತನಾಡುತ್ತಾ ನಾವೆಲ್ಲರೂ ಕೇವಲ ದೇಶ ರಕ್ಷಣೆ ಮಾಡುವುದಲ್ಲದೇ ಪರಿಸರ ರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಪ್ರತಿಯೊಬ್ಬ ವಿದ್ಯಾರ್ಥಿ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಹಾಗೂ ನಮ್ಮ ತಲೆಯಲ್ಲಿ ಒಳ್ಳೆಯ ವಿಚಾರವಿದ್ದಾಗ ಮಾತ್ರ ನಾವು ಒಳ್ಳೆಯವರಾಗಿ ಬದುಕಲು ಸಾಧ್ಯ ಹಾಗೂ ದೇಶ ರಕ್ಷಣೆ ಮತ್ತು ಸ್ವಯಂ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಅಷ್ಟೇ ಅಲ್ಲದೇ ನಮ್ಮ ಜೊತೆಗೆ ನಾವು ಪರಿಸರದ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಯಲ್ಲಿ ತೊಡಗಬೇಕೆಂದು ನುಡಿದರು. ಅದಲ್ಲೇ ಕಲ್ಪತರೂ ಅಭಿಯಾನದಡಿ ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಟ್ಟು 75 ದಿವಸಗಳವರೆಗೆ ಮಕ್ಕಳಂತೆ ರಕ್ಷಣೆ ಮಾಡಬೇಕು ಎಂದರೆ ಆಜಾದಿಕಾ ಅಮೃತ ಮಹೋತ್ಸವದ ಆಚರಣೆ ಸಾರ್ಥಕವಾಗುತ್ತದೆ. ಮತ್ತು ಎಲ್ಲಾ ಅತಿಥಿಗಳು ಮಹಾವಿದ್ಯಾಲಯದ ಆವರಣದಲ್ಲಿ ಮಾವು, ನಿರಳೆ, ನಿಂಬೆ ಹಾಗೂ ಬಿಲ್ವ ಪತ್ರೆ ಇನ್ನಿತರ ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಇದರಲ್ಲಿ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದರು. ಹಾಗೂ ಆ ಸಸಿಗಳ ಬೆಳವಣಿಗೆಯ ಪಣತೊಟ್ಟರು.

ಕಾರ್ಯಕ್ರಮದ ಮೊದಲಿಗೆ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ ಸ್ವಾಗತಿಸಿದರು ಅದೇ ರೀತಿ ಶ್ರೀ ಬಸವರಾಜ ಬಿರಾದಾರ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಯುತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಭಂಡಾರಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.