ಬ್ರಹ್ಮಕುಮಾರಿ ಆಶ್ರಮದಲ್ಲಿ ಮಕ್ಕಳ ಮೌಲ್ಯಭರಿತ ಪ್ರತಿಭಾ ಉತ್ಸವ


ಸಂಜೆವಾಣಿ ವಾರ್ತೆ
ಹೊಸಪೇಟೆ 7: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಪ್ರತಿಭಾ ಉತ್ಸವ ಗುರುವಾರ ಹಮ್ಮಿಕೊಳ್ಳಲಾಗಿತ್ತು. ನೈತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಯಿತು.
ಕ್ರೀಡೆ, ಮನೋರಂಜನೆ, ವಚನ, ಶ್ಲೋಕ್, ಶಿಕ್ಷಣದ ಹಾಗೂ ಮೆಡಿಟೇಶನ್ ಕಲಿಕೆ ಮೂಲಕ ಮಕ್ಕಳಲ್ಲಿ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಕುರಿತು ಪ್ರೇರಣೆ ಶಿಬಿರದಲ್ಲಿ ಮಾರ್ಗದರ್ಶನ ನೀಡಲಾಯಿತು. 
ಬ್ರಹ್ಮಕುಮಾರಿ ಮಾನಸ ಹಾಗೂ ರೇವತಿ ಅಕ್ಕಾನವರು ಮಾತನಾಡಿ,  ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಮಾಜಕ್ಕೆ ಆದರ್ಶಪ್ರಾಯರಾಗುವಂತ ಜೀವನ ರೂಪಿಸಿಕೊಳ್ಳುವ ಮೂಲಕ ಸಮಾಜಮುಖಿಯಾಗಲು ಪ್ರತಿಭಾ ಉತ್ಸವ ಪೂರಕವಾಗಲಿದೆ ಎಂದರು.
ಉಪಕಾರಗೃಹದ ಅಧೀಕ್ಷಕ ಎಂ.ಎಚ್.ಕಲಾದಗಿ, ವಿಶ್ವಚಿತ್ರ ಆರ್ಟ್ ಅಕಾಡೆಮಿಯ ಮಲ್ಲಿಕಾರ್ಜುನ ದೊಡ್ಡವಾಡ್, ಹೊಸಪೇಟೆ ಟೇಮ್ಸ್ ಪತ್ರಿಕೆಯ ಸಂಪಾದಕಿ ಎಸ್.ಎಂ.ಪ್ರಕಾಶ್, 160 ಕ್ಕೂ ಹೆಚ್ಚು ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು. ಉತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡು ಸಂಭ್ರಮಿಸಿದರು.