ಬ್ಯೂಟಿ ಭಾಟಿಯಾ ಮಿಂಚು

ಹೈದರಾಬಾದ್,ಜು.೩೦-ಜೈಲರ್ ಸಿನಿಮಾ ಆಡಿಯೋ ಲಾಂಚ್ ಸಮಾರಂಭದಲ್ಲಿ ಭಾಗಿಯಾಗಿದ ನಟಿ ತಮನ್ನಾ ಭಾಟಿಯಾ ತನ್ನ ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.ಕಡು ಕೆಂಪು ಫಳ ಫಳ ಹೊಳೆಯುತ್ತಿರುವ ಮಾದಕ ಉಡುಗೆ ತೊಟ್ಟು ಸಖತ್ ಮಿಂಚಿದ್ದಾರೆ. ಧರೆಗಿಳೀದ ಊರ್ವಶಿಯಂತೆ ಕಾಣುತ್ತಿರುವ ಅವರ ಚಿತ್ರಗಳನ್ನು ನೋಡಿ ಅಭಿಮಾನಿಗಳು ಅವರ ಸೌಂದರ್ಯವನ್ನು ಕೊಂಡಾಡಿದ್ದಾರೆ. ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಖತ್ ಆಗಿ ಹೆಜ್ಜೆ ಸಹ ತಮನ್ನಾ ಹಾಕಿದ್ದಾರೆ. ತಮನ್ನಾರ ’ನೂವು ಕಾವಾಲಯ್ಯ ಹಾಡು ಹಾಗೂ ಡ್ಯಾನ್ಸ್ ಸಖತ್ ವೈರಲ್ ಆಗಿದೆ. ತಮನ್ನಾ ಭಾಟಿಯಾ ಇನ್ನಷ್ಟು ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೈಲರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿ ಇತ್ತೀಚೆಗೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.