ಬ್ಯುಟಿಷನ್ ತರಬೇತಿ ಸರ್ಕಾರದ ಬೆಂಬಲ-ನಟರಾಜ್

ಬೆಂಗಳೂರು, ಜು. ೧೯- ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬ್ಯುಟಿಷನ್ ತರಬೇತಿಗೆ ಸರ್ಕಾರದ ಬೆಂಬಲ ನೀಡುವುದಾಗಿ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ನೆಹರು ಯುವ ಕೇಂದ್ರ ಸಂಘಟನೆಯ ನಿರ್ದೇಶಕ ಎಂ.ಎನ್.ನಟರಾಜ್ ಭರವಸೆ ನೀಡಿದರು.
ಕಬ್ಬನ್ ಪಾರ್ಕ್ ಸಮೀಪವಿರುವ ಸಂಚುರಿ ಕ್ಲಬ್ ಒಡೆಯರ್ ಸಭಾಂಗಣದಲ್ಲಿ ಮಹಿಳೆಯರಿಗೆ ಉಚಿತ ತರಬೇತಿ ಶಿಬಿರ ಆರಂಭ ಚಿನ್ಹೆ ಬಿಡುಗಡೆ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬ್ಯೂಟಿ ಹಾಗೂ ಫ್ಯಾಷನ್ ಘಟಕಕ್ಕೆ ನೂತನ ರಾಜ್ಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬ್ಯೂಟಿ ಹಾಗೂ ಫ್ಯಾಷನ್ ಘಟಕಕ್ಕೆ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾರವರಿಗೆ ಆದೇಶ ಪತ್ರವನ್ನು ವಿತರಿಸಿ, ಗೌರವ ಸನ್ಮಾನದೊಂದಿಗೆ ಅಧಿಕಾರ ನೀಡಲಾಯಿತು. ಅನಂತರ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನವನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಡಾ. ಶಿವಕುಮಾರ್ ನಾಗರ ನವಲೆ ವಾಚಿಸಿದರು.
ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ನೆಹರು ಯುವ ಕೇಂದ್ರ ಸಂಘಟನೆಯ ನಿರ್ದೇಶಕರಾದ ಎಂ.ಎನ್.ನಟರಾಜ್ ಮಾತನಾಡಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನೀಡಲಿರುವ ಬ್ಯೂಟಿಶನ್ ತರಬೇತಿಗೆ ಸರ್ಕಾರದ ಬೆಂಬಲವು ಕೂಡ ಇರುವುದಾಗಿ ಭರವಸೆ ನೀಡಿದರು.
ಅಧಿಕಾರ ಸ್ವೀಕರಿಸಿದ ಶ್ರೀಮತಿ ಎಂ.ಸುಧಾ ಮಾತನಾಡಿ, ಜು. ೩೧ ದಿ ಲಲಿತ್ ಅಶೋಕ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಅದ್ದೂರಿ ಪ್ಯಾಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗೆದ್ದವರಿಗೆ ಒಂದು ಲಕ್ಷ ಬಹುಮಾನ ನೀಡಲಾಗುತ್ತಿದೆ. ಈ ಶೋನಲ್ಲಿ ಭಾಗವಹಿಸುವವರಿಗೆ ಇನ್ನೂ ಅವಕಾಶವಿದೆ ತಕ್ಷಣ ರಿಜಿಸ್ಟರ್ ಮಾಡಿಕೊಳ್ಳುವುದು.ಈವರೆಗೂ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತೇರ್ಗಡೆ ಪತ್ರ ನೀಡಲಾಗಲಾವುದು, ಉಚಿತ ಸೌಂದರ್ಯ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಗಾಗಿ ಅರ್ಜಿಗಳನ್ನು ನೀಡಲಾಗುವುದು. ಆಸಕ್ತರು ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೧೮೮೬೭೬೭೦೮೬೦ ಸಂಪರ್ಕಿಸಿ ಎಂದು ತಿಳಿಸಿದರು.
ಸಂಪಾದಕ ಚೆನ್ನೇಗೌಡರು, ಕನ್ನಡವೇ ಸತ್ಯ ರಂಗಣ್ಣ, ಪ್ರದೀಪ್ ಕುಮಾರ್, ಆರ್ಟಿಸ್ಟ್ ಶ್ರೀಮತಿ ಜರಿನಾ, ಧನಂಜಯ್, ಸಂಜಯ್ ಗೌಡ, ಕೀರ್ತಿ ವಿನೋದ್ ಹಾಗೂ ಸುಶ್ಮಿತಾ ನಾಯರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.