ಬ್ಯಾರೇಜ್ ಅವ್ಯವಹಾರ ತನಿಖೆಗೆ ಆಗ್ರಹಿಸಿ ರಸ್ತೆ ತಡೆ

ಹರಪನಹಳ್ಳಿ.ಮಾ.೨೧; ತುಂಗಭದ್ರ ನದಿಯ ಪಾತ್ರದಲ್ಲಿ ನಿರ್ಮಾಣವಾಗಿರುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿ  ಭ್ರಷ್ಟಚಾರ ಮಾಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. 
ಪಟ್ಟಣದ ಪ್ರವಾಸಿ ಮಂದಿರದಿಂದ ಶನಿವಾರ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಹೊಸಪೇಟೆ ರಸ್ತೆ ಬಂದ್ ಮಾಡಿ ಒಂದು ತಾಸುಗೂ ಹೆಚ್ಚು ಸಮಯ ಪ್ರತಿಭಟಿಸಿ ಭ್ರಷ್ಟಚಾರ ನಡೆಸಿರುವವರ  ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಿಲಿಸುವಂತೆ  ಉಪವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಿದರು.  
ಎಐಟಿಯುಸಿ ಬಳ್ಳಾರಿ ಜಿಲ್ಲಾಧ್ಯಕ್ಷ ಆದಿಮೂರ್ತಿ ಮಾತನಾಡಿ, ಹರಪನಹಳ್ಳಿ ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲ್ಲೂಕಾಗಿದ್ದು, ಇಲ್ಲಿನ ಜನತೆಗೆ ಕೃಷಿನ್ನೇ ಅವಲಂಬಿಸಿದ್ದಾರೆ. ತಾಲ್ಲೂಕಿನ ರೈತರು ಮಳೆಯನ್ನೆ ಅವಲಂಬಿತವಾಗಿರುವ ಹಿನ್ನಲೆಯಲ್ಲಿ  ಮಾಜಿ ಸಿ.ಎಂ ಎಸ್.ನಿಜಲಿಂಗಪ್ಪ ಇವರು ತಾಲ್ಲೂಕಿಗೆ ನೀರುಣಿಸುವ  ಕನಸು  ಕಂಡಿದ್ದರು. ಅವರ ಆಶಯದಂತೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರರವರ ಪ್ರಯತ್ನದಿಂದ ತುಂಗಾಭದ್ರ ನದಿಯ ಗರ್ಭಗುಡಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ ದೊರೆತ್ತಿದೆ. ಆದರೆ ಗುತ್ತಿಗೆ ಪಡೆದುಕೊಂಡಿರುವ ಬೆಂಗಳೂರಿನ ಅಮೃತ ಕನಷ್ಟ್ರಕ್ಷನ್ ಕಂಪನಿಯು 14-06-2018ರಲ್ಲಿ 54 ಕೋಟಿ ಬಿಡುಗಡೆಯಾದ ಹಣದಲ್ಲಿ 18 ತಿಂಗಳೂಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು ಆದರೆ ಇರುವರೆಗೂ ಕಾಮಗಾರಿ ಪೂರ್ಣಗೊಳಿಸದೇ ಕಾಮಗಾರಿ ಮೊದಲೇ ಹಣ ಬಿಡಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದಾರೆ ದೂdvgರಿದರು.
ತಾಲ್ಲೂಕು ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್  ಮಾತನಾಡಿ, ಕಾಮಗಾರಿ ಪ್ರಾರಂಭಿಸದೇ 9.84 ಕೋಟಿ ಹಣ ಡ್ರಾ ಮಾಡಿ ಕಾಮಗಾರಿಗೆ ಚಾಲನೆ ಕೊಡದೆ ಅವ್ಯವಹಾರ ನಡೆಸಿದ್ದಾರೆ. ಜೊತೆಗೆ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಸಿದ್ದರಾಮಯ್ಯನವರ ಸರ್ಕಾರ 256 ಕೋಟಿ ಹಣ ಮಂಜೂರು ಮಾಡಿ ಕಾಮಗಾರಿ ಚಾಲನೆ ನೀಡಿದ್ದು, ಕಾಮಗಾರಿಯು ಕೆಲವೇ ಕೆರೆಗಳಿಗೆ ಪೈಪ್‍ಲೈನ್ ಮಾಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಿ ಭ್ರಷ್ಟಚಾರ ನಡೆಸಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

 ಬಳ್ಳಾರಿ ಸಿಪಿಐ ಕಾರ್ಯದರ್ಶಿ ನಾಗಭಷಣ್ ರಾವ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್, ಮುಖಂಡರಾದ ಹೆಚ್.ಎಂ.ಸಂತೋಷ, ರಮೇಶ್ ನಾಯ್ಕ್, ಬಳಿಗನೂರು ಕೊಟ್ರೇಶ್, ಚಂದ್ರನಾಯ್ಕ್, ಎಐಟಿಯುಸಿ ಮಹಿಳಾ ಅಧ್ಯಕ್ಷರಾದ ಸುಮ, ಎಸ್.ನಾಗರಾಜಪ್ಪ, ಪುಷ್ಪ, ವಿಶಾಲಮ್ಮ, ಮತ್ತಿಹಳ್ಳಿ ತಿಂದಪ್ಪ, ಬೊಮ್ಮನಹಳ್ಳಿ ದ್ವಾರಕೀಶ್  ಇತರರು ಭಾಗವಹಿಸಿದ್ದರು.