ಬ್ಯಾರಿಕೇಡ್ ಪೂರ್ಣಪ್ರಮಾಣದಲ್ಲಿ ತೆರವುಗೊಳಿಸಲು ಮನವಿ

ದಾವಣಗೆರೆ.ಜೂ.೨; ಲಾಕ್‌ಡೌನ್ ಸಮಯದಲ್ಲಿ ನಾಗರೀಕರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿರುವುದು ವಿಷಾದದ ಸಂಗತಿ. ಜಿಲ್ಲಾಡಳಿತದ ನೀತಿ-ನಿಬಂಧನೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೋನಾ ನಮ್ಮ ನಾಡಿನಿಂದ ಹೊಡೆದೊಡಿಸಬಹುದು. ಎಲ್ಲವನ್ನು ಜಿಲ್ಲಾಡಳಿತ, ಸರ್ಕಾರದ ಮೇಲೆ ಹಾಕುವ ಬದಲು ಸಾರ್ವಜನಿಕರೂ ಸಾಮಾಜಿಕ ಕಾಳಜಿಯಿಂದ ಕೈಜೋಡಿಸಿದಾಗ ಆರೋಗ್ಯವಾದ ವಾತಾವರಣ ಸುಸಂಪನ್ನಗೊಳ್ಳುತ್ತದೆ ಎಂದು ಸಾಮಾಜಿಕ ಕಾಳಜಿಯ ಸಾಲಿಗ್ರಾಮ ಗಣೇಶ್‌ಶೆಣೈ ವಿನಂತಿಸಿದ್ದಾರೆ.ಸಾರಿಗೆ ಇಲಾಖೆಯವರು, ಆರಕ್ಷಕರು ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ರಸ್ತೆಗಳನ್ನು ಪರಿಪೂರ್ಣವಾಗಿ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ವಾಹನ ಸಂಚಾರಕ್ಕೆ ನಿಷೇಧಗೊಳಿಸಿರುವುದು ಉತ್ತಮ ಆದರೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ಸಮಯವನ್ನು ಜಿಲ್ಲಾಡಳಿತ ಕೊಟ್ಟಾಗ ಎಲ್ಲಾ ರಸ್ತೆಗಳನ್ನು ನಾಗರೀಕರಿಗೆ ಸಂಚಾರಕ್ಕೆ ಮುಕ್ತಗೊಳಿಸಿ ಕಾರಣ ಈ ಸಮಯದಲ್ಲೂ ಬ್ಯಾರಿಕೇಡ್ ಅಡ್ಡ ಹಾಕಿದಾಗ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗುವುದರ ಜತೆಯಲ್ಲಿ ನಾಗರೀಕರು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಾಗೆ ಸುತ್ತಿ ಬಳಸಿ ತಿರುಗಾ ಮುರುಗಾ ಅಡ್ಡಾಡಿ ಸಮಯವೂ ವ್ಯರ್ಥ, ದುಬಾರಿಯ ಇಂಧನವೂ ವ್ಯರ್ಥ ಹಾಗೂ ವಾಹನ ಸಂಚಾರ ಜನದಟ್ಟಣಿಯೂ ಹೆಚ್ಚಾಗಿರುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ಟ್ರಾಫಿಕ್ ಇಲಾಖೆಯವರು ಸಾರ್ವಜನಿಕರ ಸಮಯ, ಪೆಟ್ರೋಲ್ ಉಳಿಸಲು, ಇಲಾಖೆಯವರು ಜನದಟ್ಟಣೆಯನ್ನು ಕಡಿಮೆ ಮಾಡಲು ಬ್ಯಾರಿಕೇಡ್ ಗಳ ತೆರವು ಮಾಡಬೇಕೆಂದು ಮನವಿ ಮಾಡಿದ್ದಾರೆ