ಬ್ಯಾನರ್‍ನಲ್ಲಿ ಅರವಿಂದ ಬೆಲ್ಲದ ಕಡೆಗಣನೆ: ಅಭಿಮಾನಿಗಳ ಅಸಮಾಧಾನ

ಧಾರವಾಡ,ಸೆ18 : ಕೃಷಿ ಮೇಳ ಹಿನ್ನೆಲೆಯಲ್ಲಿ ಧಾರವಾಡ ನಗರದಾದ್ಯಂತ ಬ್ಯಾನರ್ ಅಳವಡಿಸಲಾಗಿದೆ ಈ ಬ್ಯಾನರ್ ನಲ್ಲಿ ಶಾಸಕ ಅರವಿಂದ ಬೆಲ್ಲದ ಅವರನ್ನು ಕಡೆಗಣಿಸಲಾಗಿದೆ.
ರೈತರ ಜಾತ್ರೆ ಕೃಷಿ ಮೇಳಕ್ಕೆ ಸ್ವಾಗತ ಕೊರುವ ಬ್ಯಾನರ್‍ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಗ್ರಾಮೀಣ ಶಾಸಕ ಅಮೃತ ದೇಸಾಯಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರ ಪೆÇೀಟೋ ರಾರಾಜಿಸುತ್ತಿವೆ. ಆದರೆ ಈ ಹಿಂದೆ ಮುಖ್ಯಮಂತ್ರಿ ರೇಸ್‍ನಲ್ಲಿದ ಶಾಸಕ ಅರವಿಂದ ಬೆಲ್ಲದ ಮಾಯವಾಗಿದ್ದು, ಬಿಜೆಪಿ ಪಕ್ಷದಲ್ಲಿನ ಅಸಮಾಧಾನದ ಹೊಗೆ ಈಗ ಬ್ಯಾನರ್ ಮೂಲಕ ಬಹಿರಂಗವಾಗಿದೆ. ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿ ಹಾಗೂ ಶಾಸಕರಾಗಿರುವ ಅರವಿಂದ ಬೆಲ್ಲದ ಭಾವಚಿತ್ರ ಹಾಕಿಲ್ಲ ಎಂದು ಅರವಿಂದ್ ಬೆಲ್ಲದ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.