ಬ್ಯಾಡಿಗೆಗೆ ಹೊರಟಿದ್ದ ಮೆಣಸಿನಕಾಯಿ ವಾಹನ ಅಪಘಾತ ಇಬ್ಬರರು ರೈತರ ಸಾವು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26:  ಬ್ಯಾಡಗಿ ಮಾರುಕಟ್ಟೆಗೆ ಒಣ ಮೆಣಸಿನಕಾಯಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಇಂದು ಬೆಳಗಿನ 4 ಗಂಟೆ ಸುಮಾರಿಗೆ  ಮೊಳಕಾಲ್ಮುರು ತಾಲೂಕಿನ  ರಾಂಪುರ ಹತ್ತಿರದ ತಮ್ಮೇನಹಳ್ಳಿ,  ರಾಜಪೂರ ಬಳಿ, ಮುಂದೆ ಹೋಗುವ ಮತ್ತೊಂದು ವಾಹನ ಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ವಾಹನದಲ್ಲಿದ್ದ ದಾಸರಿ ಕೇಶಪ್ಪ (34) ಬೋಯ ವಂಡ್ರಪ್ಪ (64,) ಇವರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
ಇನ್ನೊಬ್ಬರಿಗೆ  ಮತ್ತು ಡ್ರೈವರ್ ಗೆ ಗಾಯಗಳಾಗಿದ್ದು ಅವರನ್ನು  ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಲಿಲ್ಲ ಮಾರುಕಟ್ಟೆ;
ಈ ಹಿಂದಿನ‌ ಕಾಂಗ್ರೆಸ್ ಸರ್ಕಾರ, ಇಂದಿನ‌ ಬಿಜೆಪಿ ಸರ್ಕಾರ ಇಂತಹ ಅನಾಹುತ ತಪ್ಪಿಸಲು
ಬಳ್ಳಾರಿಯಲ್ಲಿಯೇ  ಮಿರ್ಚಿ ಮಾರುಕಟ್ಟೆ  ಆರಂಭಿಸುವುದಾಗಿ ಹೇಳಿತ್ತೇ ಹೊರತು. ಈ ವರಗೆ ಆಗಲಿಲ್ಲ.
ಇದರಿಂದಾಗಿ ಕರ್ನೂಲು, ಅನಂತಪುರ, ಬಳ್ಳಾರಿ ಜಿಲ್ಲೆಯ  ರೈತರು ಬ್ಯಾಡಗಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.