ಬ್ಯಾಟಿಂಗ್ ಶೈಲಿಯಲ್ಲೇ ದ್ರಾವಿಡ್ ಕೋಚ್ ಜವಾಬ್ದಾರಿ ನಿರ್ವಹಣೆ:ಗವಾಸ್ಕರ್

ನವದೆಹಲಿ, ನ.17-ಸುರಕ್ಷಿತ ಹಾಗೂ ಸದೃಢ ಬ್ಯಾಟಿಂಗ್ ಮಾದರಿಯಲ್ಲೇ ತರಬೇತುದಾರರ ರಾಹುಲ್ ದ್ರಾವಿಡ್ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ ಎಂದು ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ದ್ರಾವಿಡ್ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾವೆಲ್ಲ ಆತ ಕ್ರೀಸ್ ನಲ್ಲಿರುವ ತನಕ ಭಾರತದ ಬ್ಯಾಟಿಂಗ್ ಸುರಕ್ಷಿತ ಮತ್ತು ಬಲಿಷ್ಟ ವಾಗಿರಲಿದೆ ಎಂದು ಚಿಂತೆಸುತ್ತಿದ್ದೆವು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕಾರಣಕ್ಜಾಗಿಯೇ ದ್ರಾವಿಡ್ ಮುಖ್ಯ ತರಬೇತುದಾರನ ಜವಾಬ್ದಾರಿಯನ್ನು ತಮ್ಮ ಬ್ಯಾಟಿಂಗ್ ಶೈಲಿಯಲ್ಲೇ ನಿರ್ವಹಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ವಿಶ್ಲೇಷಿಸಿದ್ದಾರೆ.
ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡುವೆ ಸಾಮ್ಯತೆಯಿದೆ ಎಂದು ಹೇಳಿರುವ ಗವಾಸ್ಕರ್,ಇಬ್ಬರು ಒಟ್ಟುಗೂಡಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದರು.
ರವಿಶಾಸ್ತ್ರಿ ತರಬೇತುದಾರರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದ್ರಾವಿಡ್ ಅವರನ್ನು ಭಾರತ ತಂಡದ ಮುಖ್ಯ ತರಬೇತುದಾರರನ್ನಾಗಿ ಬಿಸಿಸಿಐ ನೇಮಕ ಮಾಡಿತ್ತು.