
ಮಾನ್ವಿ,ಮಾ.೧೭- ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಇಂದು ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ, ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಇಂದು ರಾಷ್ಟ್ರೀಯ ಜಂತುಹುಳು ನಿವಾರಣೆ ಅಂಗವಾಗಿ ಡಾ ರಾಘವೇಂದ್ರ ಶೆಟ್ಟಿ ಹಾಗೂ ನಾಗರಾಜ ಶೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಇವರು ಜಂತುಹುಳು ನಿವಾರಣೆ ಮಾತ್ರೆಯನ್ನು ವಿತರಣೆ ಮಾಡಿದರು.
ನಂತರ ಗ್ರಾಮದಲ್ಲಿ ಸ್ವಚ್ಚತಾ ಕುರಿತು ಹಾಗೂ ನೀರು ನೈರ್ಮಲ್ಯ, ಶುದ್ದೀಕರಣ ಊಟ ಸೇರಿದಂತೆ ವಿವಿಧ ಆರೋಗ್ಯ ಮಾಹಿತಿಯನ್ನು ನೀಡಿ ಜಂತುಹುಳು ನಿವಾರಣೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿ ಉಪೇಂದ್ರ ಕುಮಾರ್, ಶಾರದಮ್ಮ,ಶ್ರೀದೇವಿ,ಶಕುಂತಲಾ, ಶಾರದ, ಹನುಮಂತಿ, ಪರಿಮಳ ಸೇರಿದಂತೆ ಗ್ರಾಮಸ್ಥರು ಇದ್ದರು.