ಬ್ಯಾಂಕ್ ಸಿಬ್ಬಂದಿಯ ಯಡವಟ್ಟುಪಾಲಿಕೆ ಸದಸ್ಯರ ಖಾತೆಗೆ ಬಿತ್ತು ೧೬ ಲಕ್ಷ

ದಾವಣಗೆರೆ.ಜೂ.೫: ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ 50 ಮಂದಿ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ತಲಾ 6ರಿಂದ 16 ಲಕ್ಷ ರೂ. ಜಮಾ ಆಗಿದೆ.ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ಹಣ ಜಮೆಯಾಗಿದ್ದು, ಬ್ಯಾಂಕ್​​ನ ಯಡವಟ್ಟಿನಿಂದ ಪಾಲಿಕೆಯ ಮೂರು ಕೋಟಿ ಹಣ 50 ಜನ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ಸಂದಾಯವಾಗಿದೆ. ಘಟನೆ ನಡೆದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪಾಲಿಕೆ ಸದಸ್ಯರಿಗೆ ಗೌರವಧನ ಆರು ಸಾವಿರ ಕೊಡುವ ಬದಲು ಆರು ಲಕ್ಷ ರೂ. ಖಾತೆಗೆ ಜಮಾ ಮಾಡಿರುವುದನ್ನು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.ಕೂಡಲೇ ಯಡವಟ್ಟನ್ನು ಅರಿತ ಬ್ಯಾಂಕ್ ಸಿಬ್ಬಂದಿ ಕೆಲ ಅಕೌಂಟ್​​​ಗಳನ್ನು ತಕ್ಷಣವೇ ಬ್ಲಾಕ್ ಮಾಡಿದ್ದಾರೆ.ನಂತರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿಯವರು ಹಣ ಡ್ರಾ ಮಾಡಿಕೊಂಡ ಸದಸ್ಯರಿಗೆ ಕರೆ ಮಾಡಿ ಹಣ ವಾಪಸ್​ ಪಡೆದುಕೊಂಡಿದ್ದಾರೆ.