ಬ್ಯಾಂಕ್ ಸಿಬ್ಬಂದಿಗೆ ಸ್ಟೀಮರ್ ವಿತರಣೆ

ಗುಳೇದಗುಡ್ಡ ಜೂ.9- ಕೋವಿಡ್ 19 ಸೋಂಕು ತಗುಲದಂತೆ ಮುಂಜಾಗೃತವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಲಕ್ಷ್ಮೀ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಪಟ್ಟಣದ ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಅವರು ಲಕ್ಷ್ಮೀ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಸ್ಟೀಮ್‍ರಗಳನ್ನು ವಿತರಿಸಿ ಮಾತನಾಡಿದರು. ಕೋವಿಡ್ 19 ಬರದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಿ ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು. ಈಗಾಗಲೇ ಕೊರೊನಾ 2ನೇ ಅಲೆ ಜನರಿಗೆ ಸಾಕಷ್ಟು ತೊಂದರೆಗಳನ್ನು ಮಾಡಿದ್ದು, 3ನೇ ಅಲೆ ಬರಬಹುದೆಂದು ನಿರೀಕ್ಷಿಸಲಾಗಿದೆ.
ನಿತ್ಯ ಸಾರ್ವಜನಿಕ ಒಡನಾಡದಲ್ಲಿರುವ ನಮ್ಮ ಬ್ಯಾಂಕನ ಸಿಬ್ಬಂದಿಗಳು ತಮ್ಮ ಆರೋಗ್ಯದ ದೃಷ್ಠಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥ, ಔಷಧಿಗಳನ್ನು ತೆಗೆದುಕೊಳ್ಳವ ಜೊತೆಗೆ ನಿತ್ಯ ಬಿಸಿ ನೀರಿನ ಹವೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ ಎಂದು ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಕಮಲಕಿಶೋರ ಮಾಲಪಾಣಿ, ನಿರ್ದೇಶಕರಾದ ಸಂಪತಕುಮಾರ ರಾಠಿ, ಸಂಜೀವ ಕಾರಕೂನ, ಗಣೇಶ ಶೀಲವಂತ, ಮುರುಗೇಶ ರಾಜನಾಳ, ಸಂಗಣ್ಣ ಹುನಗುಂದ, ಮೃತ್ಯುಂಜಯ ಕರನಂದಿ, ರವೀಂದ್ರ ಅಲದಿ, ಪರಶುರಾಮ ಪವಾರ, ದೀಪಕ ನೇಮದಿ, ಶ್ರೀಮತಿ ಲಕ್ಷ್ಮೀಭಾಯಿ ರೂಡಗಿ, ಪ್ರಧಾನ ವ್ಯವಸ್ಥಾಪಕ ಆರ್.ಎಮ್. ಕಬಾಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ದಾನೇಶ ಕರಣಿ, ಬ್ಯಾಂಕ ಸಿಬ್ಬಂದಿ ಆರ್.ಆರ್.ಶೇಬಿನಕಟ್ಟಿ, ಬಸವರಾಜ ಕುಂಬಾರ, ದೀಪಕ ಶೆಟ್ಟರ ಸೇರಿದಂತೆ ಮತ್ತಿತರರಿದ್ದರು.