ಬ್ಯಾಂಕ್ ಸಾಲ ಆದೇಶ ಮಾಡದಂತೆ ಒತ್ತಾಯ

ಕೋಲಾರ, ಮೇ ೪: ಕೊರೊನಾ ೨ನೇ ಅಲೆ ನಿಯಂತ್ರಣಕ್ಕೆ ಬರುವವರೆಗೂ ಸರ್ಕಾರಿ ಖಾಸಗಿ ಬ್ಯಾಂಕ್ ಸಾಲ ವಸೂಲಾತಿ ಮಾಡದಂತೆ ಆದೇಶ ಮಾಡಿ ಸಂಕಷ್ಟದಲ್ಲಿರುವ ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕೆಂದು ರೈತಸಂಘದಿಂದ ಉಪತಹಸೀಲಾರ್ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ, ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಕೊರೊನಾ ೨ನೇ ಅಲೆಯ ಅಟ್ಟಹಾಸ ದಿನೇ ದಿನೇ ಹೆಚ್ಚಾಗುವುದರ ಜೊತೆಗೆ ರಣವೇಗದಲ್ಲಿ ಮುನ್ನುಗುವ ಜೊತೆಗೆ ಸಾವು ನೋವುಗಳನ್ನು ಹೆಚ್ಚಾಗುತ್ತಿವೆ. ಇದರಿಂದ ರೋಗ ನಿಯಂತ್ರಣಕ್ಕೆ ಸರ್ಕಾರ ಆರೋಗ್ಯ ಇಲಾಖೆಯ ತಜ್ಞರ ಸಲಹೆಯಂತೆ ೧೪ ದಿನಗಳ ಕಾಲ ಲಾಕ್‌ಡೌನ್ ಮಾಡುವ ಮುಖಾಂತರ ಕೊರೊನ ನಿಯಂತ್ರಣದ ವಿರುದ್ಧ ಸರ್ಕಾರ ಮಾಡಿರುವ ಆದೇಶಕ್ಕೆ ನಾವು ಬದ್ಧವಾಗಿದ್ದೇವೆ. ಅದರಂತೆ ಲಕ್ಷಾಂತರ ಕಾರ್ಮಿಕರು, ರೈತರು, ಮಧ್ಯಮವರ್ಗದ ಜನಸಾಮಾನ್ಯರಿಗೆ ದುಡಿಯಲು ಕೆಲಸವಿಲ್ಲದೇ ರೈತರು ಬೆಳೆಗಳಿಗೆ ಸೂಕ್ತವಾದ ಬೆಲೆ ಇಲ್ಲದೆ
ಕಂಗಾಲಾಗಿ ಜೀವನ ನಿರ್ವಹಣೆ ಕಷ್ಟವಾಗಿರುವ ಈ ಸಮಯದಲ್ಲಿ ಸರ್ಕಾರಿ/ಖಾಸಗಿ ಬ್ಯಾಂಕ್, ಪೈನಾಸ್ಸ್, ಬಡ್ಡಿಗೆ ಪಡೆದಿರುವ ಸಾಲ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದರು.ಸರ್ಕಾರಿ ಖಾಸಗಿ ಬ್ಯಾಂಕ್‌ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುವಂತೆ ಕಾನೂನು ನೋಟಿಸ್ ನೀಡಿ ರೈತರ, ಕೂಲಿ ಕಾರ್ಮಿಕರ ಜೀವನದ ಜೊತೆ ಚಲ್ಲಾಟವಾಡುವ ಜೊತೆಗೆ ನಾಯಿಕೊಡೆಗಳಂತೆ ಗಲ್ಲಿಗೊಂದು ಆಂದ್ರಪೈನಾನ್ಸ್, ಫಿನ್‌ಕೇರ್, ಬಜಾಜ್ ಮತ್ತಿತರ ಖಾಸಗಿ ಫೈನಾಸ್ಸ್‌ಗಳ ಮಾಲೀಕರು ಪ್ರತಿ ಹಳ್ಳಿ ಹಳ್ಳಿಗೂ ಸಾಲ ವಸೂಲಿ ಮಾಡಲು ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿ ದೌರ್ಜನ್ಯದಿಂದ ಸಾಲಗಳನ್ನು ವಸೂಲು ಮಾಡುತ್ತಿದ್ದಾರೆಂದು ಸಂಬಂಧಪಟ್ಟವರ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ರೈತಸಂಘದ ಹಸಿರುಸೇನೆ ಜಿಲ್ಲಾಧಕ್ಷ ಕಿರಣ್ ಮಾತನಾಡಿ, ಮಾನವೀಯತೆ ಇಲ್ಲದ ಖಾಸಗಿ ಫೈನಾನ್ಸ್ ಮಾಲೀಕರು ವಾಹನ ಸಾಲ ಪಡೆದಿರುವ ವಿರುದ್ಧ ಸಣ್ಣ ರೈತರಿಗೆ, ಖಾಸಗಿ ಪೈನಾಸ್ಸ್ ಮಾಲೀಕರು ದೌರ್ಜನ್ಯದಿಂದ ಪುಡಿರೌಡಿಗಳನ್ನು ಇಟ್ಟುಕೊಂಡು ರಸ್ತೆಗಳಲ್ಲಿ ವಾಹನಗಳನ್ನು ಸೀಜ್ ಮಾಡಿ, ಸಾಲ ಪಡೆದಿರುವವರ ಮೇಲೆ ಹಲ್ಲೆಯನ್ನು ಮಾಡಿರುವ ಉದಾಹಣೆಗಳು ಸಾಕಷ್ಟಿವೆ. ಇದರಿಂದ ಈಗಾಗಲೇ ವೈರಸ್ ಹಾವಳಿಯಿಂದ ನೊಂದಿರುವ ಜನರು ಸಾಲ ತೀರಲಾಗದೇ ಅವಮಾನಕ್ಕೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅಹಿತಕರ ಘಟನೆಗಳು
ನಡೆಯದಂತೆ ಮುನ್ನಚ್ಚರಿಕೆಯಾಗಿ, ತಾಲ್ಲೂಕಿನಾಧ್ಯಂತ ಸರ್ಕಾರಿ ಖಾಸಗಿ ಬ್ಯಾಂಕ್, ಬಡ್ಡಿ, ವ್ಯವಹಾರ ವಾಹನ ಸಾಲಗಳ ವಸೂಲಾತಿಯನ್ನು ಮುಂದೂಡಲು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಬಲವಂತದಿಂದ ಸಾಲ ವಸೂಲಿ ಮಾಡಬಾರದೆಂಬ ಆದೇಶ ಮಾಡುವ ಜೊತೆಗೆ, ತಮ್ಮ ಆದೇಶವನ್ನು ಮೀರಿ ಸಾಲ ವಸೂಲಾತಿಗೆ ಮುಂದಾಗಿ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸಂಬಂಧಪಟ್ಟ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಚಲಪತಿ,