ಬ್ಯಾಂಕ್ ನೌಕರರ ಯುನಿಯನ್ ಮುಖಂಡ ಆರ್.ಎಸ್ ಕುಲಕರ್ಣಿ ಸೇವಾ ನಿವೃತ್ತಿ

ವಿಜಯಪುರ, ಜೂ.3-ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯುನಿಯನ್ ರಾಜ್ಯ ಸಮಿತಿ ಉಪಾಧ್ಯಕ್ಷ ಆರ್ ಎಸ್ ಕುಲಕರ್ಣಿ ಅವರು ತಮ್ಮ 38 ವರ್ಷಗಳ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಅವರನ್ನು ಸೇವೆಗೈದ ಕೆನರಾ ಬ್ಯಾಂಕ್ ಎ ಎಫ್ ಶಾಖೆಯಲ್ಲಿ ಆತ್ಮೀಯವಾಗಿ ಬೀಳ್ಕೋಡಲಾಯಿತು.
ಶಾಖೆಯ ವ್ಯವಸ್ಥಾಪಕ ಬಾಲರಾಜ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಅಮಿತ ಮುರಾರಿ ಸೇವಾ ನಿವೃತ್ತ ಕುಲಕರ್ಣಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಅದೇ ರೀತಿ ಕುಲಕರ್ಣಿ ಅವರಿಗೆ ಕೆನರಾ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಸಹ ಬ್ಯಾಂಕ್ ನೌಕರರ ಯುನಿಯನ್ ಪರವಾಗಿ ಆತ್ಮೀಯವಾಗಿ ಬೀಳ್ಕೋಡಲಾಯಿತು. ಹಿರಿಯ ಸದಸ್ಯ ಎಸ್.ಡಿ ಮಾಗಿ ಸ್ವಾಗತಿಸಿದರು. ಚೀಫ್ ಮ್ಯಾನೇಜರ ವಿ ಶ್ರೀನಿವಾಸರಾವ್ ಅಧ್ಯಕ್ಷತೆ ವಹಿಸಿದ್ದರು. ಯುನಿಯನ್ ರಾಜ್ಯ ಸಮಿತಿ ಸದಸ್ಯ ಅಮಿತ ಮುರಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸನ್ಮಾನಕ್ಕೆ ಉತ್ತರಿಸಿದ ಆರ್.ಎಸ್ ಕುಲಕರ್ಣಿ ಅವರು ತಮ್ಮ ಸೇವಾವಧಿಯಲ್ಲಿ ಸಲ್ಲಿಸಿದ ಕಾರ್ಯಗಳ ಕುರಿತು ವಿವರಿಸಿದರಲ್ಲದೆ, ಎಲ್ಲದಕ್ಕೂ ಸಹಕರಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕುಲಕರ್ಣಿ ಅವರು ಈ ಹಿಂದೆ ವಿಜಯಪುರ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ಎಸಗಿದ್ದನ್ನು ಈ ಸಂದರ್ಭದಲ್ಲಿ ಮಾತನಾಡಿದ ಎಲ್ಲರೂ ಪ್ರಶಂಸಿದರಲ್ಲದೇ, ಬ್ಯಾಂಕ್ ಉದ್ಯೋಗಿಗಳ ಸಮಸ್ಯೆ ಪರಿಹರಿಸುವಲ್ಲಿ ಶ್ರಮಿಸಿದ್ದನ್ನು ನೆನಪಿಸಿಕೊಂಡರು.