ಬ್ಯಾಂಕ್ ಖಾತೆಯಿಂದ ಆಧಾರವಿಲ್ಲದೇ ಸೈಬರ್ ವಂಚಕರಿಂದ ಹಣ ಲೂಟಿ

ಇಂಡಿ:ಮೇ.22: ಬ್ಯಾಂಕುಗಳು ಎಂದಾಗ ಭದ್ರತೆಯ ಹಿತ ದೃಷ್ಠಿಯಿಂದ ಸೇಫ್ ಎಂಬ ನಂಬಿಕೆ,ವಿಶ್ವಾಸಾರ್ಹತೆ ಪಡೆದು ಸಾರ್ವಜನಿಕರಲ್ಲಿ ಮೆಚ್ಚುಗೆ ಗಳಿಸಿರುವ ರಾಷ್ಟ್ರೀಕೃತ ಬ್ಯಾಂಕುಗಳು ಆದ್ದರಿಂದಲೆ ಗ್ರಾಹಕರು ಅತೀ ಹೆಚ್ಚಿನ ಲೇವಾಲೇವಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡುತ್ತಾರೆ.
ಆದರೆ ಇಂಡಿ ಪಟ್ಟಣದಲ್ಲಿ ಪಾನ್ ಮಸಾಲಾ ವ್ಯಾಪಾರಿಯೋರ್ವರ ಖಾತೆಯಲ್ಲಿನ ಸರಿ ಸುಮಾರು 2.10.0000 (ಎರಡು ಲಕ್ಷ ಹತ್ತು ಸಾವಿರ ರೂ ) ಹಣವನ್ನು ಸೈಬರ್ ವಂಚಕರು ಸಾಯಿ ಸನ್ನಿಧಿ ಹೆಸರಿನಲ್ಲಿ ಶಿವಾನಂದಯ್ಯಾ ,ಲಂಕ್ಕುಂಡಿಮಠ ಇವರ ಬ್ಯಾಂಕ ಅಕೌಂಟಿನಲ್ಲಿದ್ದ ಹಣ ದೋಚಿದ್ದಾರೆ.ಅಕೌಂಟ ನಂಬರ್( 12500493921 ) ಖಾತೆಯಲ್ಲಿ ಒಂದೇ ಸರತಿಗೆ ಹಣ ಕೀಳದೆ ಒಮ್ಮೆ ಹಂತ ಒಂದನೆ ಸಲ 1 ಲಕ್ಷ 2ನೇ ಸಲ 35 ಸಾವಿರ, 3ನೇಬಾರಿಗೆ 50ಸಾವಿರ 4ನೇ ಬಾರಿಗೆ 25 ಸಾವಿರ ಹೀಗೆ 4ಬಾರಿ ಬ್ಯಾಂಕ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ. ಗ್ರಾಹಕ ಶಿವಾನಂದ ಬ್ಯಾಂಕ ಅಕೌಂಟ ನಂಬರ್ ಹೇಳಿಲ್ಲ. ಎ.ಟಿ.ಎಂ ಇಲ್ಲ. ಆಧಾರ ಕಾರ್ಡ ಇಲ್ಲ, ಚೆಕ್ಕ ಇಲ್ಲ, ಮೋಬಾಯಿಲ್ ಯಾಫ್ ಇಲ್ಲ ಯಾವುದೇ ಆಧಾರ ರಹಿತ ಇಲ್ಲದೆ ಬ್ಯಾಂಕ ಖಾತೆಯಿಂದ ಹಣ ಪಡೆದುಕೊಂಡಿರುವುದು ಹೇಗೆ ಎಂಬುದು ಸಾರ್ವಜನಿಕರಲ್ಲಿ ಯಕ್ಷಪ್ರಶ್ನೆಯಾಗಿದೆ.
ರವಿವಾರ ದಿನದಂದು ಬ್ಯಾಂಕ ಹ್ಯಾಕ್ ಮಾಡಲಾಗಿದೆ ಖಾತೆಯಲ್ಲಿನ ಹಣ ಡ್ರಾಮಾಡಿದ್ದಾರೆ ಇದನ್ನು ಶಾಖಾ ವ್ಯವಸ್ಥಾಪಕರಿಗೆ ವಿಚಾರಿಸಿದರೆ ಇಂದು ರವಿವಾರ ನಾಳೆ ನೋಡೋಣ ಎಂದು ಖಾತೆದಾರ ಶಿವಾನಂದ ಲಕ್ಕುಂಡಿಮಠ ಇವರಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಂದು ಸೋಮುವಾರ ಮುಂಜಾನೆ ಹಣ ಕಳೆದುಕೊಂಡ ಗ್ರಾಹಕ ವ್ಯವಸ್ಥಾಪಕರನ್ನು ವಿಚಾರಿಸಲು ಹೋದಾಗ ನೀವು ಸರದಿ ಸಾಲಿನಲ್ಲಿ ನಿಲ್ಲಿ ಪಾಳಿ ಬಂದಾಗ ಬನ್ನಿ ಎಂದು ಹೇಳಿದ್ದಾರೆ.
ಹಣ ಕಳೆದುಕೊಂಡ ಶಿವಾನಂದ ಲಕ್ಕುಂಡಿಮಠ ಮಾನಸಿಕವಾಗಿ ನೊಂದುಕೊಂಡು ತಮ್ಮ ಸ್ನೇಹಿತರಿಗೆ ಹಾಗೂ ಪಟ್ಟಣದ ಗಣ್ಯರಾದ ಬಸವಸಮೀತಿ ಅಧ್ಯಕ್ಷ ಅನೀಲಗೌಡ ಬಿರಾದಾರ, ಕರವೇ ಅಧ್ಯಕ್ಷ ಬಾಳು ಮುಳಜಿಯವರಿಗೆ ನಡೆದ ಘಟನೆ ತಿಳಿಸಿದಾಗ ವ್ಯವಸ್ಥಾಪರೊಂದಿಗೆ ಮಾತನಾಡೋಣ ಖಾತೆಯಲ್ಲಿನ ಹಣ ಎಲ್ಲಿ ಹೋಯಿತು ವಿಚಾgರಿಸೋಣ ಎಂದು ಬ್ಯಾಂಕಿಗೆ ಬಂದು ಕೇಳಿದಾಗ ನಂತರ ಮಾತನಾಡಿದ ಶಾಖಾ ವ್ಯವಸ್ಥಾಪಕ ನಿಮಗೆ ಅನ್ಯಾಯವಾಗಿರುವುದು ಸತ್ಯ ಆದರೆ ಸೈಬರ್ ಕ್ರಾಯಿಮ್ ಮೂಲಕ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಬಾಳು ಮುಳಜಿ, ಅನೀಲಗೌಡ ಬಿರಾದಾರ. ಗಿರೀಶ ಪಾಟೀಲ, ಸತೀಶಗೌಡ ಪಾಟೀಲ,ಶಿವಾನಂದ ಲಕ್ಕುಂಡಿಮಠ ಸೇರಿದಂತೆ ಅನೇಕರು ಇದ್ದರು.