ಬ್ಯಾಂಕ್ ಉನ್ನತಿಗೆ ಗ್ರಾಹಕರ ವಿಶ್ವಾಸ ಕಾರಣ: ಯತ್ನಾಳ

ಚಡಚಣ ನ 20:ಕೇವಲ 14 ವರ್ಷಗಳಲ್ಲಿ 1593 ಉಳಿತಾಯ ಖಾತೆ, 721 ಕೋಟಿ ರೂ ಠೇವಣಿ ಯೊಂದಿಗೆ 131 ಶಾಖೆಗಳಾಗಲು ಗ್ರಾಹಕರ ವಿಶ್ವಾಸ ಹಾಗೂ ಉತ್ತಮ ವ್ಯವಹಾರವೆ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಇಲ್ಲಿಗೆ ಸಮೀಪದ ರೇವತಗಾಂವ ಗ್ರಾಮದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ಧಸಿರಿ ಶಾಖೆಯಿಂದ ವಿಜಯಪುರ ಜಿಲ್ಲೆಯ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬಡ್ಡಿ ರಹಿತ 5ಸಾವಿರ ರೂ.ಸಾಲ ನೀಡಲಾಗುತ್ತಿದೆ. ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ 15ಕೋಟಿ, ರಾಷ್ಟ್ರೀಯ ಹೆದ್ದಾರಿಗೆ 1000ಕೋಟಿ ಸಾಲ ನೀಡಿದ್ದೇವೆ. ಅವರು ಸರಿಯಾದ ವ್ಯವಹಾರ ನಮ್ಮ ಜೊತೆ ಇಟ್ಟುಕೊಂಡಿದ್ದಾರೆ. 24 *365 ಎಂಬ ಹೆಸರಿನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವಂತಹ ಶಾಖೆಗಳು ಪ್ರಾರಂಭಿಸಿದ್ದೇವೆ. ಮಹಿಳಾ ಶಾಖೆಗಳು ಪ್ರಾರಂಭಿಸಿದ್ದೇವೆ. ರಾಜ್ಯದ ಪ್ರತಿ ತಾಲೂಕಿಗೊಂದು ಶಾಖೆಗಳು ತೆಗೆಯುವ ಯೋಜನೆ ರೂಪಿಸಲಾಗಿದೆ ಎಂದ ಅವರು, 2 ರೂ.ಕೋಟಿ ವೆಚ್ಚದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಅನಕೂಲ ವಾಗಲೆಂದು ಮನೂಕ (ಒಣದ್ರಾಕ್ಷಿ) ಶೇಖರಣಾ ಘಟಕ ಮಾಡಲಾಗುತ್ತಿದೆ.ನಾನು ಶಾಸಕನಾಗುವದಕ್ಕಿಂತ ಮುಂಚೆ ವಿಜಯಪುರದಲ್ಲಿ ಬಾಗವಾನ ಎಮ್ ಎಲ್ ಎ ಅವರ ತಮ್ಮ ಒಣ ದ್ರಾಕ್ಷಿ ಖರೀದಿ ಸಂಘದ ಅಧ್ಯಕ್ಷರಿದ್ದರು. ಹೊರಗಿನಿಂದ ಒಣ ದ್ರಾಕ್ಷಿ ಖರೀದಿದಾರರು ಬಂದು ಖರೀದಿ ಮಾಡಲು 10ಲಕ್ಷ ಹಣ ಮುಂಗಡವಾಗಿ ನೀಡಿ ದ್ರಾಕ್ಷಿ ಖರೀದಿ ಮಾಡಬೇಕು ಎಂಬ ನಿಯಮ ಮಾಡಿದ್ದರು. ಆದರೆ ನಾನು ಶಾಸಕನಾದ ಬಳಿಕ ಇಂತಹ ಅವ್ಯವಹಾರ ಯಾವತ್ತೂ ನಡೆಯಬಾರದೆಂದು ಇ-ಟೆಂಡರ್ ಮಾಡುವ ಮೂಲಕ ರೈತರಿಗೆ ಲಾಭವಾಗುವಂತೆ ಮಾಡಿದ್ದೇನೆ ಎಂದ ಅವರು, ಭೀಮಾ ತೀರದ ಗ್ರಾಮಗಳ ರಸ್ತೆ ನೋಡಿದರೆ ಸಂಪೂರ್ಣ ಹದಗೆಟ್ಟು ಹೋಗಿವೆ. ಆದರೆ ಯಾಕೋ ಕಾರಜೋಳ ಸಾಹೇಬರು ದೇವಾನಂದ ಹೆಸರು ಜೋಡಿಸಲು ಹೊರಟಂತಿದೆ ಆದರೂ ಅವರ ಜೊತೆ ಮಾತಾಡ್ತೀನಿ ಅಂತಾ ಮಾರ್ಮಿಕವಾಗಿ ನುಡಿದರು. ನಾನು ಯಾರಿಗೂ ಅಂಜುವವನಲ್ಲ ನಾನು ಯಾವಾಗಿದ್ದರೂ ನೇರವಾದಿ, ಸಿಎಂ ಸಾಹೇಬರಿಗೆ ಯಾರೊಬ್ಬರೂ ಕೇಳುವ ಸ್ಥಿತಿಯಲ್ಲಿರಲಿಲ್ಲ ನಾನು ಒತ್ತಾಯಿಸಿದಾಗ 10ಕಾರ್ಪೋರೇಷನ್ ಗಳಿಗೆ 10250 ಕೋಟಿ ರೂ ಹಣ ರಾತ್ರೋ ರಾತ್ರಿ ಮಂಜೂರಾಗಿದೆ ಎಂದರು.
ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಹತ್ತಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು ಮಾತನಾಡಿ, ಪ್ರವಾಹದಿಂದ ಭೀಮಾ ನದಿ ತೀರದ ಜನರ ಗೋಳು ಹೇಳತೀರದಾಗಿದೆ. ಪ್ರವಾಹ ಬಂದಾಗೊಮ್ಮೆ ಈ ಭಾಗದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿಧಾನಸೌಧದಲ್ಲಿ ದ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಮುಖಂಡರಾದ ಬಂದಣ್ಣ ಕುಂಬಾರ, ಮಹಾದೇವ ಹಿರೇಕುರಬಾರ, ಶಿವಾನಂದ ಅಜುರ, ಭೀಮಾಶಂಕರ ಪೂಜಾರಿ, ನೀಲಕಂಠ ಗೌಡ ಬಿರಾದಾರ ಸಿದ್ದರಾಮ ಗುಡ್ಡಾಪುರೆ, ರೇವಪ್ಪ ಇರಾಮನಿ, ಆಡಳಿತ ಮಂಡಳಿಯ ಸದಸ್ಯರಾದ ಶಿವಾನಂದ ಅಣ್ಣೆಪ್ಪನವರ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ ಸೇರಿದಂತೆ ಇತರರು ಇದ್ದರು.ಇದೇ ಸಂದರ್ಭದಲ್ಲಿ ಉತ್ತಮ ಗ್ರಾಹಕರಿಗೆ ಸನ್ಮಾನಿಸಿದರು.
ಶಿಕ್ಷಕ ಅಡಕೆ ನಿರೂಪಿಸಿದರು.