ಬ್ಯಾಂಕ್ ಆಫ್ ಬರೋಡ ನೌಕರರಿಗೆ ಬೀಳ್ಕೊಡುಗೆ

ಕಾರಟಗಿ:ಮೇ:17: ಪಟ್ಟಣದ ಬ್ಯಾಂಕ್ ಆಫ್ ಬರೋಡದಲ್ಲಿ ನೌಕರರಾಗಿ 30 ವರ್ಷ ಸೇವೆ ಸಲ್ಲಿಸಿ ಶನಿವಾರ ನಿವೃತ್ತರಾದ ಬಿ. ನಾಗಪ್ಪ ಇವರಿಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಪಟ್ಟಣದ ಗ್ರಾಹಕರು ಬ್ಯಾಂಕ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು,
ಬ್ಯಾಂಕ್ ಆಫ್ ಬರೋಡದಲ್ಲಿ ಹೆಡ್ ಕ್ಯಾಸಿಯರ್ ಆಗಿ ಸೇವೆ ಸಲ್ಲಿಸಿದ್ದ ಬಿ ನಾಗಪ್ಪ ಇವರು ನಿವೃತ್ತಿ ಹೊಂದಿದ್ದರಿಂದ ಶನಿವಾರದಂದು ಬೀಳ್ಕೊಡಲಾಯಿತು,
ಸನ್ಮಾನ ಸ್ವೀಕರಿಸಿ ಮಾತಾನಾಡಿದ ಅವರು ಪಟ್ಟಣದ ಗ್ರಾಹಕರು ಬ್ಯಾಂಕ್ ನೌಕರರ ಹಾಗೂ ಸಿಬ್ಬಂದಿಗಳು ತಮಗೆ ಉತ್ತಮ ಸಹಕಾರ ನೀಡಿದ್ದಾರೆ ಆದ್ದರಿಂದ ಅವರಿಗೆ ಕೃತಜ್ಞತೆಗಳು ತಿಳಿಸಲು ಇಚ್ಚಿಸುತ್ತೇನೆ ಎಂದು ತಿಳಿಸಿದರು,
ಬ್ಯಾಂಕ್ ವ್ಯವಸ್ಥಾಪಕರು ಸುಧಾಕರ್, ಸಿಬ್ಬಂದಿ ಎಸ್. ಬಸವರಾಜ್. ರಾಮಣರಡ್ಡಿ. ಮಂಜುನಾಥ್. ಹನುಮಂತಪ್ಪ ಇನ್ನಿತರರು ಇದ್ದರು.