ಬ್ಯಾಂಕ್ ಆಫ್ ಬರೋಡಾ ಕಾರ್ಯ ಮೆಚ್ಚುವಂತಹದ್ದು : ಹೊಳಕರ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಜು.22:ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವ ಬ್ಯಾಂಕ್ ಆಫ್ ಬರೋಡಾ ಕಾರ್ಯ ಮೆಚ್ಚುವಂಗಹದ್ದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಹೇಳಿದರು. ತಾಲೂಕಿನ ಕಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಲ್ಕಿಯ ಬ್ಯಾಂಕ್ ಆಫ್ ಬರೋಡಾ ವತಿಯಿಂದ ನೀಡಲಾಗುತ್ತಿರುವ ಶೈಕ್ಷಣಿಕ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳೇ ವಿದ್ಯಾಭ್ಯಾ ಮಾಡುತ್ತಿರುವರು. ಇಂತಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಈ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉಪಯೋಗವಾಗುವಂತಹ ಶಿಕ್ಷಣ ಪರಿಕರಗಳನ್ನು ನೀಡುತ್ತಾ ಮಕ್ಕಳಿಗೆ ಪ್ರೋತ್ಸಾಹ ಮಾಡುತ್ತಿರುವ ಬ್ಯಾಂಕ್ ಆಫ್ ಬರೋಡಾ ಕಾರ್ಯ ಪ್ರಶಂಶನೀಯವಾಗಿದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ನೀಡುತ್ತಿರುವ ಬ್ಯಾಂಕ್‍ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬ್ಯಾಂಕ್ ಆಫ್ ಬರೋಡಾ ಶಾಕಾ ವ್ಯವಸ್ಥಾಪಕ ಭಂಡಾರು ಜಿ.ಆರ್.ಕಿರಣ ಮಾತನಾಡಿ, ಬ್ಯಾಂಕ್ ಆಫ್ ಬರೋಡಾದ 115ನೇ ವಾರ್ಷಿಕೋತ್ಸವ ನಿಮಿತ್ಯ ಬಡ ವಿದ್ಯಾರ್ಥಿಗಳಿಗ ಶೈಕ್ಷಣಿಕ ಕಲಿಕಾ ಕಿಟ್ ವಿತರಿಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರು. ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ವಾರ್ಷಿಕೋತ್ಸವ ನಿಮಿತ್ಯ ಅಧೂರಿ ಖರ್ಚು ಮಾಡುವುದಕ್ಕೆ ತಿಲಾಂಜಲಿ ಹೇಳಿ, ಬಡ ಮಕ್ಕಳಿಗೆ ಕಲಿಕಾ ಕಿಟ್ಟ ನೀಡುತ್ತಿರುವ ಬ್ಯಾಂಕ್‍ನ ಕಾರ್ಯ ಮೆಚ್ಚುವಂತಹದು ಎಂದು ಹೇಳಿದರು. ಬಿಆರ್‍ಪಿ ಆನಂದ ಹಳೆಂಬರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಾಂಬಳೆ, ಸಿಆರ್‍ಪಿ ಸಂತೋಷ.ಡಿ, ಸಂತೋಷ ವಾಡೆ, ಬ್ಯಾಂಕ್ ಸಿಬ್ಬಂದಿ ಸೌಮ್ಯ ಮತ್ತು ಅಮರನಾಥ, ಶಿಕ್ಷಕರಾದ ಬಸವರಾಜ ಕುಂಬಾರ, ಮುಸ್ತಾಫಾ ಉಪಸ್ಥಿತರಿದ್ದರು. ಕುಪೇಂದ್ರ ಜಗಶೆಟ್ಟೆ ನಿರೂಪಿಸಿದರು.