ಬ್ಯಾಂಕ್‌ನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ : ವಸಂತಕುಮಾರ್

ಹಿರಿಯೂರು.ಡಿ.21:  ಹಿರಿಯೂರು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈ ಬಾರಿ ಲಾಭ ಗಳಿಸಿದ್ದು ಪ್ರಗತಿಗೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಬ್ಯಾಂಕ್ ನ ಅಧ್ಯಕ್ಷರಾದ ಆರ್.ವಸಂತಕುಮಾರ್ ಹೇಳಿದರು. ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ವಾಗ್ದೇವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಬ್ಯಾಂಕ್ ನ 43ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 4.53 ಕೋಟಿ  ಠೇವಣಿ ಇದೆ 394.55 ಲಕ್ಷ ಸಾಲ ಇದೆ  ಕೊರೊನಾ ಸಮಯದಲ್ಲೂ ಸುಮಾರು ನಾಲ್ಕುವರೆ ತಿಂಗಳು ಸತತವಾಗಿ ವಸೂಲಾತಿ ನಡೆಸಿದ್ದು ಬ್ಯಾಂಕನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದ್ದೇವೆ ಎಂದು ಹೇಳಿದರು. ಷೇರುದಾರರ ಪರವಾಗಿ  ಧನಂಜಯಕುಮಾರ್, ಹೊರಕೇರಪ್ಪ, ಕೇಶವಮೂರ್ತಿ ಮತ್ತಿತರರು ಬ್ಯಾಂಕಿನ ಅಭಿವೃದ್ಧಿಗೆ ಬೇಕಾದ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ನಿರ್ದೇಶಕರಾದ ಕೆ.ಆರ್.ವೆಂಕಟೇಶ್, ಆರ್.ಮೊಹಮ್ಮದ್ ರಫಿ, ಹೆಚ್.ಪಿ.ರವೀಂದ್ರನಾಥ್, ಅಸ್ಗರ್ ಅಹಮ್ಮದ್, ಎಂ.ಆರ್.ರಾಜಶೇಖರ್, ಆರ್.ಕೆ.ಲೋಕೇಶ್, ಟಿ.ಚಂದ್ರಶೇಖರ್, ಹೆಚ್.ಆರ್.ತಿಪ್ಪೇಸ್ವಾಮಿ, ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಟಿ.ರಂಗಸ್ವಾಮಿ ಹಾಗೂ ಸಿಬ್ಬಂದಿವರ್ಗದವರು ಹಾಗೂ ಷೇರುದಾರರು ಮತ್ತು ಪಿಗ್ಮಿ ಪ್ರತಿನಿಧಿಗಳು  ಪಾಲ್ಗೊಂಡಿದ್ದರು. ಶ್ರೀಮತಿ ತ್ರಿವೇಣಿ ಪ್ರಾರ್ಥಿಸಿದರು ಬ್ಯಾಂಕ್‌ನ ಸಿಬ್ಬಂದಿ ಪಿ.ಕೊಟ್ರೇಶ್ ಮತ್ತು ಪಿ.ಸಿ.ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.  – ಅರ್ಬನ್ ಬ್ಯಾಂಕ್ 21.12