ಬ್ಯಾಂಕ್‌ಗಳು ವ್ಯವಹಾರಕ್ಕೆ ಸೀಮಿತವಾಗದೇ ಸಮಾಜಕ್ಕೆ ಕೊಡುಗೆ ನೀಡಲಿ

ದಾವಣಗೆರೆ, ಮಾ.೭; ಒಂದು ಶತಮಾನದ ಇತಿಹಾಸ ಪರಂಪರೆ ಇರುವ ಕರ್ಣಾಟಕ ಬ್ಯಾಂಕ್‌ಗೆ ಬರುವ ಲಾಭದಲ್ಲಿ ಶೇಕಡಾ 2ರಷ್ಟು ಸಮಾಜಕ್ಕೆ, ದೀನ ದಲಿತರಿಗೆ, ಆರ್ಥಿಕ ಕುಂಠಿತಗೊಳ್ಳುವ ಬಡ ಬಗ್ಗರಿಗೆ ಕೊಡುಗೆ ನೀಡುವ, ಸಹಾಯ ಮಾಡುವ ಪರಿಕಲ್ಪನೆ ಪ್ರಾರಂಭದಿಂದಲೇ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕುಗಳಿಗೆ ಈ ನಿಯಮವನ್ನು ನಿಗದಿ ಪಡಿಸಿದೆ ಬ್ಯಾಂಕುಗಳು ಕೇವಲ ವ್ಯವಹಾರಕ್ಕೆ ಸೀಮಿತವಾಗದೇ ಮಾನವೀಯ ಮೌಲ್ಯದೊಂದಿಗೆ ಸಾಮಾಜಿಕ ಕಾಳಜಿಯೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವಿಕೆ ನಮ್ಮ ಕಾಯಕಕ್ಕೆ ಸಾರ್ಥಕತೆ ಬರುತ್ತದೆ. ಈ ಹಂತದಲ್ಲಿ ಯಾವುದೇ ಆರ್ಥಿಕ ಸಬಲತೆ ಇಲ್ಲದೇ ವಾಣಿಜ್ಯನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯನ್ನಾಗಿ ಪರಿವರ್ತಿಸುವ ನಿರಂತರ ಮೂರು ದಶಕದ ಸಾಧನೆಯ ಕಲಾಕುಂಚದ ಕ್ರಿಯಾಶೀಲತೆ ನಿಜಕ್ಕೂ ಶ್ಲಾಘನೀಯ ಎಂದು ಕರ್ಣಾಟಕ ಬ್ಯಾಂಕ್‌ನ ಶಿವಮೊಗ್ಗದ ಪ್ರಾಂತೀಯ ಮುಖ್ಯ ಕಚೇರಿಯ ಸಹಾಯಕ ಮಹಾಪ್ರಬಂಧಕರಾದ ಹಯವದನ ಉಪಾದ್ಯಾಯ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರುದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ  ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಮತ್ತು ಕಲಾಕುಂಚಕ್ಕೆ ಬ್ಯಾಂಕ್ ನೀಡಿದ ಸಹಕಾರ, ಸೇವೆಗಳಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಲಾಕುಂಚ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮಾತನಾಡಿ, “ಮಾನವನ ಬದುಕು ಕೇವಲ ಹೊಟ್ಟೆ ಪಾಡಿಗೆ ಸೀಮಿತವಾಗದೇ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ತೊಡಗಿಸಿಕೊಂಡಾಗ ಖಿನ್ನತೆಯ ಮನಸುಗಳು ಪುಳಕಿತಗೊಳ್ಳುತ್ತದೆ ಹಾಗೂ ಬದುಕಿಗೆ ಬೆಲೆ ಬರುತ್ತದೆ ಎಂದರು.ದಾವಣಗೆರೆ ಕರ್ಣಾಟಕ ಬ್ಯಾಂಕ್‌ನ ಎಲ್ಲಾ ಶಾಖೆಗಳ ವ್ಯವಸ್ಥಾಪಕರಾದ ಬಿ.ಎನ್.ರಾಘವೇಂದ್ರ ನಾಯ್ಕ, ಕಿರಣ್ ಬಿ.ಎನ್.,ಲಕ್ಷö್ಮಣ್ ಬಾಡಗಿ, ರಾಕೇಶ್ ಶ್ಯಾನಭೋಗ್, ರಮೇಶ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲಾಕುಂಚ ಕಾರ್ಯಕ್ರಮದ ಕುರಿತು ತಮ್ಮ ಸಂತೋಷವನ್ನು ಹಂಚಿಕೊಂಡರು. ಕಲಾಕುಂಚದ ಮುಖ್ಯಸ್ಥರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ, ಶ್ರೀಮತಿ ಪರ್ವಿನ್ ಅಮೀರ್‌ಜಾನ್ ಶ್ರೀಮತಿ ವಸಂತಿ ಮಂಜುನಾಥ್ ಗೌರವ ಉಪಸ್ಥಿತರಿದ್ದರು.