ಬ್ಯಾಂಕುಗಳು ಕಾಮಧೇನುವಾಗಿ ಪರಿಣಮಿಸಲಿ:ನಾಡಗೌಡ

ತಾಳಿಕೋಟೆ:ಅ.19: ಯಾವುದೇ ಒಂದು ಸಂಸ್ಥೆ ಬ್ಯಾಂಕು ಬೆಳೆದಾಗ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಸಂಸ್ಥೆಯನ್ನು ನಡೆಸಿಕೊಂಡು ಹೋಗುವಂತಹ ಅದಕ್ಕೆ ಸಂಬಂದಿಸಿದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿವರ್ಗದವರ ಪ್ರಾಮಾಣಿಕತನ ಎಂಬುದು ಅವರಲ್ಲಿ ಇದ್ದರೆ ಆ ಸಂಸ್ಥೆ ಉನ್ನತಮಟ್ಟಕ್ಕೆ ಹೋಗುವದರಲ್ಲಿ ಯಾವ ಸಂಶಯವಿಲ್ಲಾವೆಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ,ದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಮತ್ತು ಭೂಮಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬಸವೇಶ್ವರ ಸೌಹಾರ್ದ ಪತ್ತಿನ ಈ ಸಂಘದ ಅಧ್ಯಕ್ಷರಾದ ಜಿ.ಎಸ್.ಕಶೆಟ್ಟಿ ಅವರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಆ ಕಾರಣದಿಂದಲೇ ಈ ಸಂಸ್ಥೆಯು ಉನ್ನತಮಟ್ಟಕ್ಕೇರಲು ಕಾರಣವಾಗಿದೆ ಎಂದರು. ಯಾರೇ ಆಗಲಿ ಅಗತ್ಯ ಕಾರ್ಯಕ್ಕಾಗಿ ಅರ್ಜಿ ಹಾಕುತ್ತಾರೆ ಯಾರು ಯೋಗ್ಯರೆಂಬುದು ಸರ್ಕಾರಿ ಅಧಿಕಾರಿಗಳು ಅದನ್ನು ಬಹಳೇ ತೀಕ್ಷಣವಾಗಿ ನೋಡುತ್ತಾರೆಂದು ಹೇಳಿದ ಶಾಸಕ ನಾಡಗೌಡ ಅವರು ಸದರಿ ಬಸವೇಶ್ವರ ಸಹಕಾರಿ ಸಂಘದ ಎಪಿಎಂಸಿ ಸ್ಥಳದಲ್ಲಿದ್ದ ಈ ಜಾಗೆ ಕೊಡಲಿಕ್ಕೆ ಬರುವದಿಲ್ಲಾವೆಂದಿದ್ದರು ಜಿ.ಎಸ್.ಕಶೆಟ್ಟಿ ಅವರು ರೈತರೆಂಬ ವಾದ ಮಂಡಿಸಿದಾಗ ಅಂದಿನ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ಅವರು ವ್ಯಾಪಾರಸ್ಥರಿಗೆ ರೈತರಿಗೆ ಅನುಕೂಲವಾಗುತ್ತದೆ ಎಂಬುದು ಸಂಬಂದಿತರಿಗೆ ಮನವರಿಕೆ ಮಾಡಿದಾಗ ಈ ಜಾಗೆ ದೊರೆಯಲು ಕಾರಣವಾಗಿದೆ ಎಂದರು. ನಾವು ದ್ವನಿ ಎತ್ತಿ ಮಾತನಾಡುತ್ತೇವೆ ಸತ್ಯಾಂಶವೆಂಬುದು ಇದ್ದರೆ ಅದಕ್ಕೆ ಬೆಲೆ ಬರುತ್ತದೆ ಎಂದರು. ಯಾವುದೇ ಪಕ್ಷದ ರಾಜಕೀಯವರು ಯಾವುದೇ ಬೇದ ಭಾವವಿಲ್ಲದೇ ನನ್ನನ್ನು ಗೌರವಿಸುತ್ತಾ ಸಾಗಿಬಂದಿದ್ದಾರೆ ದೇಶಮುಖ, ನಾಡಗೌಡ ಮನೆತನದವರು ಇವರೇ ಎಂದು ಗುರುತಿಸಿ ನನ್ನನ್ನು ಈ ಭಾಗದ ಶಾಸಕರೆಂದು ಗೌರವಿಸುತ್ತಾರೆಂದು ತಮಗೆ ಸಿಗುವ ಗೌರವ ಕುರಿತು ವಿವರಿಸಿದ ನಾಡಗೌಡ ಅವರು ಸರ್ಕಾರದ ವೈಪಲ್ಯತೆ ಕುರಿತು ಪ್ರಜೆಗಳಾದವರು ದ್ವನಿ ಎತ್ತಬೇಕು ಯಾಕೆಂದರೆ ಕೇವಲ ಶಾಸಕರಿಂದ ಕೆಲಸಗಳು ಆಗುತ್ತಾವೆಂಬುದು ತಪ್ಪು ಕಲ್ಪನೆ ಎಂದರು. ಈ ವರ್ಷ ಬೀಕರ ಬರಗಾಲವಿದೆ ವಿದ್ಯುತ್ ಕೊರತೆಯೂ ಇದೆ ಸುಪರ್ ಶರಾವತಿ ನಧಿಯಲ್ಲಿ ನೀರಿಲ್ಲಾ ಬೇರೆ ರಾಜ್ಯಗಳಿಂದ ನೀರನ್ನು ಖರೀದಿ ಮಾಡಬೇಕಾಗುತ್ತದೆ ಆದರೂ ದರ ಹೆಚ್ಚಳವಾಗಿದೆ ಮಳೆ ಇಲ್ಲಾ ಬೆಳೆ ಇಲ್ಲಾ ಇಂತಹ ಸ್ಥಿತಿಗತಿಯಲ್ಲಿ ಪ್ರಜೆಗೆ ಬೆಂಬಲಿಸಬೇಕೆಂದರೆ ಮಿತವಾದಂತಹ ಬಳಕೆ ಎಂಬುದು ಆಗಬೇಕಾಗಿದೆ ಎಂದರು. ಯಾವುದೇ ಪರಸ್ಥಿತಿ ಅನುಗುಣವಾಗಿ ನಡೆಯಬೇಕು ವಿನಾಃ ಕಾರಣ ರಾಜಕೀಯವಾಗಿ ಬಿಂಬಿಸಬಾರದೆಂದರು. ನೈಸರ್ಗಿಕ ಬರಗಾಲವಾದಾಗ ಈ ಕುರಿತು ರಾಜಕೀಯಕ್ಕೆ ಲೇಪನ ಕೊಡುವದು ಸರಿಯಲ್ಲಾ ವೆಂದ ನಾಡಗೌಡ ಅವರು ರಾಜಕಾರಣವೆಂಬುದು ಎಲ್ಲಿ ಪ್ರವೇಶವಾಗಬೇಕು ವಿನಾಃ ಕಾರಣ ಬೇಕಾದಲ್ಲಿ ರಾಜಕಾರಣ ಬೆರೆಯಬಾರದೆಂದರು. ಕುಡಿಯುವ ನೀರು, ಶಾಲೆ, ಕಾಲೇಜು ಶಿಕ್ಷಣ ಆರೋಗ್ಯ ಉದ್ಯೋಗದ ಕಡೆ ಲಕ್ಷ ಕೊಡಬೇಕು ಅಂತಹದಕ್ಕೆ ಸಹಾಯವಾಗಿ ಇಂತಹ ಸಣ್ಣ ಪುಟ್ಟ ಪಾನನ್ಸ್‍ಗಳು ಎದ್ದು ನಿಂತರೆ ಸಮಾಜದಲ್ಲಿ ಆಸ್ಥಿರ ಸ್ಥಿರತೆ ತರಲು ಸಾಧ್ಯವೆಂದರು.
ಇನ್ನೋರ್ವ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ಇಂದಿನ ಭೂಮಿಪೂಜಾ ಕಾರ್ಯಕ್ರಮ ನೆರವೇರಿಸಿದ ಈ ಸ್ಥಳ ದೊರೆಯಬೇಕಾದರೆ ಶಾಸಕ ಸಿ.ಎಸ್.ನಾಡಗೌಡ ಅವರ ಫಲದಿಂದಲೇ ಆಗಿದೆ ಅವರಿಂದ ಹಾಸ್ಟೇಲ್ ಕಟ್ಟಡ, ಕೆಎಚ್‍ಬಿ ಕ್ವಾಲನಿ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ನೀಡಿದ ಸ್ಥಳ ಒಳಗೊಂಡು ಇವೇಲ್ಲವೂ ಆಗಲಿಕ್ಕೆ ಶಾಸಕ ನಾಡಗೌಡ ಅವರ ಸಹಕಾರವೇ ಕಾರಣವಾಗಿದೆ 224 ವಿಧಾನ ಸಭಾ ಸದಸ್ಯರಲ್ಲಿ ನಾಡಗೌಡ ಅವರು ಒಬ್ಬರು ಇದ್ದರೂ ಅವರು ಪ್ರಚಾರ ಪ್ರೀಯರಲ್ಲಾ ಅವರು ಮಾಡಿದ ಕಾರ್ಯಚಟುವಟಿಕೆಗಳು ಅವರು ಭಹಿರಂಗ ಪಡಿಸುತ್ತಿಲ್ಲಾ ಅವರು ಮಾಡಿದಂತಹ ಕಾರ್ಯಗಳು ಅನೇಕ ಮಾದರಿಯ ಕಾರ್ಯಗಳಾಗಿವೆ ಎಂದು ಶಾಸಕ ನಾಡಗೌಡ ಅವರ ಕಾರ್ಯಚಟುವಟಿಕೆಗಳ ಕುರಿತು ಭಹು ಮಾರ್ಮಿಕವಾಗಿ ವಿವರಿಸಿದರು.
ಭೂಮಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ ಇಂಗಳೇಶ್ವರ ವಚನ ಶೀಲಾ ಮಂಟಪದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಆಶಿರ್ವಚನ ವಿಯುತ್ತಾ ಬ್ಯಾಂಕುಗಳು ವ್ಯವಸ್ಥಿತವಾಗಿ ಇರಬೇಕಾದರೆ ಕೊಡುವ ತೆಗೆದುಕೊಳ್ಳುವ ವ್ಯವಹಾರಗಳು ಸರಿಯಾಗಿ ಇರಬೇಕು ಬ್ಯಾಂಕುಗಳು ನೀಡಿದ ಹಣ ಸರಿಯಾಗಿ ಮರುಪಾವತಿ ಮಾಡಿದರೆ ಅಂತವರು ಮುಂದೆ ಬರಲು ಸಾಧ್ಯವೆಂದರು. ಬ್ಯಾಂಕಿನಲ್ಲಿ ಹಣ ತೆಗೆದು ಕೊಡುವವರು ಬಹಳೇ ಏಚ್ಚರದಿಂದ ಕಾರ್ಯ ಮಾಡಬೇಕು ಎಂದು ಆಡಳಿತ ಮಂಡಳಿಯವರಿಗೆ, ಹಾಗೂ ಸಿಬ್ಬಂದಿಯವರಿಗೆ ಸಲಹೆ ನೀಡಿದ ಶ್ರೀಗಳು ದುಡ್ಡು ಕಳೆದುಕೊಳ್ಳುವದು ಬೇಡಾ ಸದ್ಗುಣಗಳನ್ನು ಕಳೆದುಕೊಳ್ಳುವದು ಬೇಡಾ ಎಂದು ತಿಳಿ ಹೇಳಿದ ಶ್ರೀಗಳು ಬ್ಯಾಂಕಿನ ಕಟ್ಟಡದ ಕಾರ್ಯ ವರ್ಷದಲ್ಲಿಯೇ ಪೂರ್ಣಗೊಳಿಸಿ ರೈತರಿಗೆ ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
ಇದೇ ಸಮಯದಲ್ಲಿ ಮುದ್ದೇಬಿಹಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಗುರು ತಾರನಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವೇಶ್ವರ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಜಿ.ಎಸ್.ಕಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಘೇಶ ವಿರಕ್ತಮಠ, ಸೈಯದ ಶಕೀಲಅಹ್ಮದ ಖಾಜಿ, ಸಂಘದ ಉಪಾಧ್ಯಕ್ಷ ಎಂ.ಎಸ್.ಸರಶೆಟ್ಟಿ, ಸಂಘದ ನಿರ್ದೇಶಕರುಗಳಾದ ಕಾಶಿನಾಥ ಮುರಾಳ, ಬಿ.ಎಸ್.ಕಿಣಗಿ, ಎ.ಆಯ್.ಜಾಲವಾದಿ, ಆಯ್.ಸಿ.ಸಜ್ಜನ, ಸಿ.ಬಿ.ರೂಡಗಿ(ಮಿಣಜಗಿ), ಸುಭಾಸ ಹೂಗಾರ, ಶ್ರೀಮತಿ ಎಂ.ಜಿ.ಯರನಾಳ, ಶ್ರೀಮತಿ ಎಸ್.ಎಸ್.ಸುರಪೂರ(ನಾಯ್ಕೋಡಿ), ಹೇಮರಡ್ಡಿ ಮಲ್ಲಮ್ಮ ಬ್ಯಾಂಕಿನ ಅಧ್ಯಕ್ಷ ಬಿ.ಎನ್.ಹಿಪ್ಪರಗಿ, ಮೊದಲಾದವರು ಇದ್ದರು.
ಮಹಾಂತೇಶ ಮುರಾಳ ಸ್ವಾಗತಿಸಿದರು. ನಿರ್ದೇಶಕ ಕಾಶಿನಾಥ ಮುರಾಳ ನಿರೂಪಿಸಿದರು. ವ್ಯವಸ್ಥಾಪಕ ಎಂ.ಎಸ್.ಪಾಟೀಲ ವಂದಿಸಿದರು.