ಬ್ಯಾಂಕುಗಳಲ್ಲಿ ಕನ್ನಡ ಬಳಿಕೆ ಅಭಿಯಾನಕ್ಕೆ ಸೋನಾರೆ ಚಾಲನೆ

ಬೀದರ:ಡಿ.31: ನಗರ ಸೇರಿದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟುಗಳ ಮೇಲಿರುವ ಕನ್ನಡೇತರ ನಾಮಫಲಕಗಳಿಗೆ ಕಪ್ಪು ಮಸಿ ಬಳೆಯಲಾಗುವುದು ಎಂದು ಕನ್ನಡ ಅನುಷ್ಠಾನ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ಎಚ್ಚರಿಕೆ ನೀಡಿದರು.

ನಗರದ ಕುಂಬಾರವಾಡಾ ಎಸ್‌ಬಿಐ ಲೀಡ್‌ ಬ್ಯಾಂಕ್‌ ಎದುರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಮಫಲಕಗಳನ್ನು ಕನ್ನಡದಲ್ಲೇ ಬರೆಸಬೇಕು. ಇತರೆ ಭಾಷೆಯ ಫಲಕಗಳಿಗೆ ಮಸಿ ಹಚ್ಚಬೇಕಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿಮಾತನಾಡಿದರು. ಮನವಿ ಸ್ವೀಕರಿಸಿಮಾತನಾಡಿದ ಎಸ್‌ಬಿಐ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕ ಬಾಳಪ್ಪ ಕಮತಗಿ,ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಕನ್ನಡಭಾಷೆಯಲ್ಲಿಯೇ ವ್ಯವಹಾರ ಮಾಡಲು ಆಯಾ ಬ್ಯಾಂಕ್‌ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದರು.